Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ : ಆಸರೆಯಾದ ಚುರುಮುರಿ ವ್ಯಾಪಾರ

ಮಧ್ಯಮ ವರ್ಗದಕುಟುಂಬವದು. ಧರ್ಮಸ್ಥಳದಲ್ಲಿ ಫೋಟೋ ಸ್ಟುಡಿಯೊನಂಬಿ ಬದುಕುಕಟ್ಟಿಕೊಂಡಿತ್ತು. ಮೊಬೈಲ್‌ಗಳ ಟ್ರೆಂಡ್ ಶುರುವಾದ ನಂತರ ಸ್ಟುಡಿಯೋ ವ್ಯಾಪಾರ ವಹಿವಾಟಿಗೆಧಕ್ಕೆಯಾಯಿತು. ಆಗಲೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಇಡೀಕುಟುಂಬದಆರ್ಥಿಕತೆಗೆಕುಂದುಂಟಾಗದಂತೆ ನೋಡಿಕೊಂಡದ್ದು ಆ ಮನೆಯ ಹೆಣ್ಣುಮಗಳು. ಆಕೆಯ ಹೆಸರುದಾಕ್ಷಾಯಿಣಿ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ವಸ್ತು ಪ್ರದರ್ಶನಪ್ರಾಂಗಣದಲ್ಲಿಇವರುಚುರುಮುರಿ ಸಿದ್ಧಪಡಿಸಿ ಮಾರುತ್ತಾರೆ. ಪತಿಯ ಫೋಟೋ ಸ್ಟುಡಿಯೋ ಮುಚ್ಚಿದ ನಂತರತಾನೇಚುರುಮುರಿ ಸಿದ್ಧಪಡಿಸಿ ಮಾರಿಕುಟುಂಬದಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾಳೆ.
ಶ್ರೀಶಕ್ತಿ ಮಹಿಳಾಅಭಿವೃದ್ದಿ ಸಂಸ್ಥೆಯಆರ್ಥಿಕ ಸಾಹಯದೊಂದಿಗೆ ಸಣ್ಣ ವ್ಯಾಪಾರ ಪ್ರಾರಂಭಿಸಿ, ಹಲವಾರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಪ್ರಾರಂಭದಲ್ಲಿ ಹಲವಾರು ತೊಂದರೆಗಳಿದ್ದರೂಅದನ್ನು ಸವಾಲಾಗಿ ಸ್ವೀಕರಿಸಿ ಸಾಧಿಸಿ ತೋರಿಸಿದ್ದಾರೆ. ಈಗ ಕುಟುಂಬದ ಸಂಪೂರ್ಣಜವಬ್ದಾರಿಯನ್ನುಇವರೇ ನಿಭಾಯಿಸುವುದಲ್ಲದೆ, ತಮ್ಮ ಮಗನನ್ನು ಹೈದ್ರಾಬಾದ್‌ನಲ್ಲಿಐ.ಐ.ಟಿ ಓದಿಸುತ್ತಿದ್ದಾರೆ. ಇನ್ನೊಬ್ಬ ಮಗನನ್ನು ಮಂಗಳೂರಿನ ನವೋದಯದಲ್ಲಿಓದಿಸುತ್ತಿದ್ದಾರೆ. ಮಕ್ಕಳನ್ನು ಓದಿಸುತ್ತಿರುವ ಹೆಮ್ಮೆಅವರದ್ದು. ಅಷ್ಟೇಅಲ್ಲದೇ, ಸಂಘದ ಮಹಿಳೆಯರ ಅಭಿವೃದ್ಧಿಗೋಸ್ಕರಇಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಉತ್ಸವಗಳಲ್ಲಿ ಸಂಘದ ಸದಸ್ಯರಿಗೆಉಚಿತ ಸ್ಟಾಲ್‌ಗಳನ್ನು ನೀಡುವ ಮೂಲಕ  ಶ್ರೀಶಕ್ತಿ ಮಹಿಳಾ ಅಭಿವೃದ್ಧಿ ಸಂಘ ಅವರಿಗೆ ಸಹಾಯ ಮಾಡುತ್ತದೆ. ಗುಂಪಿನ ಪ್ರತಿ ಸ್ವ ಉದ್ಯೋಗಿಗಳಿಗೆ ವರ್ಷಕ್ಕೆ 5 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.
ವರದಿ: ಮಂಜುನಾಥ್‌ಎಸ್.
ಚಿತ್ರಗಳು: ಚಂದನಎಸ್.

Related posts

Leave a Reply

Your email address will not be published. Required fields are marked *