Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ : ಪ್ರೇಕ್ಷಕರ ಮನ ಗೆದ್ದ ಮಾತನಾಡುವ ಗೊಂಬೆ

ಅವರು ಆ ಕ್ಷಣಕ್ಕೆ ಕೇಳಿದ ಪ್ರಶ್ನೆ-  ದೊಡ್ಡವನಾದಾಗಏನಾಗಬೇಕೆಂದುಕೊಂಡಿರುವೆ? ತತ್‌ಕ್ಷಣಕ್ಕೆರಿಕ್ಕಿ ಹೇಳಿದ್ದು – ದೇಶದ ಸೈನಿಕನಾಗಬೇಕೆಂದುಕೊಂಡಿರುವೆ.
ಹಾಗಂದದ್ದೇತಡ ನೆರೆದ ಪ್ರೇಕ್ಷಕರಿಂದ ಮೆಚ್ಚುಗೆ ರೂಪದ ಚಪ್ಪಾಳಗಳ ಅನುರಣನ. ಪ್ರಶ್ನೆ ಕೇಳಿದವರು ಜಾದೂಕಲಾವಿದೆ, ಬಿಗ್‌ಬಾಸ್‌ಖ್ಯಾತಿಯ ಸುಮರಾಜ್‌ಕುಮಾರ್. ಅದಕ್ಕೆ ಪ್ರತಿಕ್ರಿಯಿಸಿದ್ದು ರಿಕ್ಕಿ ಹೆಸರಿನ ಗೊಂಬೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ ಮೈಸೂರಿನಸುಮರಾಜ್‌ಕುಮಾರ್‌ಅವರುರಿಕ್ಕಿ ಎಂಬ ಬೊಂಬೆಯನ್ನು ಪ್ರಶ್ನಿಸುವ ಮತ್ತುಅದಕ್ಕೆ ಪ್ರತಿಕ್ರಿಯಿಸುವ ದ್ವಿಪಾತ್ರದ ಸಂಭಾಷಣೆಯನ್ನುಆಕರ್ಷಣೀಯವಾಗಿಪ್ರಸ್ತುತಪಡಿಸಿದರು.

ಸುಮರಾಜ್ ಕೇಳಿದ ಪ್ರಶ್ನೆಗಳಿಗೆ ರಿಕ್ಕಿಉತ್ತರಿಸುತ್ತಾಜನರನ್ನು ರಂಜಿಸಿದನು.ರೈತದೇಶಕ್ಕೆಅನ್ನ ನೀಡಿ ಹಸಿವನ್ನು ನೀಗಿಸಿದರೆ ಸೈನಿಕ ನಮ್ಮರಕ್ಷಣೆ ಮಾಡುತ್ತಾನೆಎಂದು ಸುಮರಾಜ್‌ಕುಮಾರ್‌ರಿಕ್ಕಿಯನ್ನುಕೊಂಡಾಡಿದರು.ಜಾದೂ ಪ್ರದರ್ಶನದಲ್ಲಿ ಬಣ್ಣದ ಪೇಪರ್‌ನಿಂದಹೂ, ಪೇಪರ್ ಚೂರುಗಳಿಂದ ಪೇಪರ್‌ದಾರ, ನಾಲ್ಕು ಬಣ್ಣದ ಬಟ್ಟೆಯ ಚೂರುಗಳಿಂದ ಒಂದುಚೌಕಾಕಾರದ ಬಟ್ಟೆಯನ್ನು ಮಾಡಿದರು.ಸುದ್ದಿ ಪತ್ರಿಕೆ ಹರಿದುಅದೇ  ಚೂರುಗಳನ್ನು ಜೋಡಿಸಿ ಪ್ರೇಕ್ಷರ ಮನಗೆದ್ದಿತು. ಅವರುಜಾದುಗಾರ್‌ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ಮಾತನಾಡುವ ಗೊಂಬೆ ಹಾಗೂ ಜಾದೂ ಪ್ರದರ್ಶನತರಬೇತಿ ಪಡೆದಿದ್ದಾರೆ. ಈಗಾಗಲೇ ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿ 2500ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ.

ಕಸ್ತೂರಿ ವಾಹಿನಿಯಲ್ಲಿ ಕಾಮನ ಬಿಲ್ಲು ಮಕ್ಕಳ ಕಾರ್ಯಕ್ರಮದ ನಿರೂಪಣೆ, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಾಸ್ಟರ್ ಹಿರಣ್ಣಯ್ಯಅವರು ನಡೆಸಿಕೊಡುತ್ತಿದ್ದ ಮಾತಿನ ಮಂಟಪದಲ್ಲಿ ಭಾಗವಹಿಸಿದ್ದಾರೆ ಹಾಗೂ ಹಲವಾರುಜನಪ್ರೀಯ ಕಾರ್ಯಕ್ರಮಗಳ ನಿರೂಪಣೆ ಮಾಡಿಜನ ಮೆಚ್ಚುಗೆ ಗಳಿಸಿದ್ದಾರೆ.
ಬರಹ: ಶ್ವೇತಾ. ಮುಂಡ್ರುಪ್ಪಾಡಿ
ಚಿತ್ರ: ಚಂದನ

Related posts

Leave a Reply

Your email address will not be published. Required fields are marked *