Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ : ರುಡ್‍ಸೆಟ್ ಬಜಾರ್‍ನಲ್ಲಿ ಹನಿ ಜಾಮ್

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ  ಎಲ್ಲೆಲ್ಲೂ ಬಣ್ಣ ಬಣ್ಣದ ಬೆಳಕಿನ ಚಿತ್ತಾರ. ಒಂದೆಡೆ ಹಲವಾರು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಇನ್ನೊಂದೆಡೆ ವಸ್ತು ಪ್ರದರ್ಶನದ ಅಂಗಡಿ ಮುಂಗಟ್ಟುಗಳು. ಇದೆಲ್ಲದರ ನಡುವೆ ಮುಖ್ಯವೆನ್ನಿಸಿದ್ದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದ ರುಡ್ ಸೆಟ್, ಗ್ರಾಮಾಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ರುಡ್ ಸೆಟ್ ಬಜಾರ್. ಇಲ್ಲಿ ಕರ್ನಾಟಕದ ಹಲವಾರು ಕಡೆಯಿಂದ ಬಂದಿದ್ದ ರುಡ್ ಸೆಟ್ ತರಬೇತಿದಾರರು ಸ್ವತಃ ಅವರೇ ಮನೆಯಲ್ಲೇ ಸಿದ್ಧಪಡಿಸಿದ್ದ ವಸ್ತುಗಳಿದ್ದವು.

ರುಡ್ ಸೆಟ್ ಬಜಾರ್‍ನಲ್ಲಿ ಪ್ರತಿ ವರ್ಷವೂ ಅನೇಕ ಬಗೆಯ ವಸ್ತುಗಳನ್ನು ಮಾರಾಟಕ್ಕೆ ಇಡುತ್ತಾರೆ. ಈ ಬಾರಿ ವಿಶೇಷವಾಗಿ ಜೇನುತುಪ್ಪದ ಅಂಗಡಿಯೊಂದನ್ನು ಹಾಕಲಾಗಿತ್ತು. ಪುತ್ತೂರಿನ ಮನೋಹರ್ ಮೊದಲ ಬಾರಿಗೆ ರುಡ್ ಸೆಟ್ ಬಜಾರ್‍ನಲ್ಲಿ ತಮ್ಮ ಮಳಿಗೆಯನ್ನು ಆರಂಭಿಸಿದ್ದರು. ಅಲ್ಲಿ ಜೇನು ಕೃಷಿಯಿಂದ ಬಂದ ಜೇನುತುಪ್ಪವನ್ನು ಎರಡು-ಮೂರು ಬಗೆಯ ಪ್ರಮಾಣದ ಸೀಸೆಗಳಲ್ಲಿ ಹಾಕಿ ಮಾರಾಟಕ್ಕೆ ಇಟ್ಟಿದ್ದರು.

ಮನೋಹರ್ ತಮ್ಮ ಮನೆಯವರು ಹಾಗೂ ಕೆಲಸದವರ ಸಹಾಯದಿಂದ ವರ್ಷಕ್ಕೆ ನಾಲ್ಕೈದು ತಿಂಗಳಲ್ಲಿ ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೇನುಗೂಡಿಗಾಗಿ ಬೇರೆಯವರ ರಬ್ಬರ್ ತೋಟವನ್ನು ಗುತ್ತಿಗೆಗೆ ಪಡೆಯುತ್ತಾರೆ. ಅವರು ಮಾರಾಟಕ್ಕಿಟ್ಟಿದ್ದ ಹಲವು ಬಗೆಯ ಜೇನುಗಳಲ್ಲಿ ಕುಂಟಾಲ್ ಅಥವಾ ಕಾಡು ಜೇನು ಪ್ರಮುಖವಾದದ್ದು. ಅದರ ಜೊತೆಗೆ ಹನಿ ಜಾಮ್ (ಜೇನು ತುಪ್ಪದಿಂದ ತಯಾರಿಸಿದ ಜಾಮ್) ಎಲ್ಲರ ಗಮನ ಸೆಳೆಯಿತು.

ರುಡ್‍ಸೆಟ್‍ನಲ್ಲಿ ಎರಡು ವರ್ಷ ಕಾಲ ತರಬೇತಿ ಪಡೆದಿರುವ ಮನೋಹರ್ ಅವರನ್ನು ಮಳಿಗೆ ಹಾಕಲು ಆಹ್ವಾನಿಸಲಾಗಿತ್ತು. ಪ್ರಥಮ ಬಾರಿಗೆ ಮಳಿಗೆಯನ್ನು ಹಾಕಿದ ಅವರಿಗೆ ಜನರಿಂದ ಒಳ್ಳೆಯ ರೀತಿಯ ಪ್ರತಿಕ್ರಿಯೆ ದೊರೆಯಿತು. ಚಿಕ್ಕ ಪ್ರಮಾಣದ ಹನಿ ಜಾಮ್ ಗೆ 80 ರೂಪಾಯಿಯಂತೆ ಹಾಗೂ ದೊಡ್ಡ ಪ್ರಮಾಣದ ಸೀಸೆಗೆ ತಲಾ 200 ರೂಪಾಯಿಯನ್ನು ನಿಗದಿ ಮಾಡಿದ್ದರು. ಹಾಗೆ 1ಕೆಜಿ ಜೇನುತುಪ್ಪಕ್ಕೆ 400 ರೂಪಾಯಿ ನಿಗದಿ ಮಾಡಿದ್ದರು. ಅವರ ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಅವರು ತಯಾರಿಸುವ ಜೇನು ಉತ್ಪನ್ನಗಳಿಗೆ ಒಳ್ಳೆಯ ರೀತಿಯ ಬೇಡಿಕೆ ಇದ್ದು, ರೂಟ್ ಸಂಸ್ಥೆಯ ವತಿಯಿಂದಲೂ ಅವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಜರುಗುವ ಮೇಳಗಳಲ್ಲಿ ಭಾಗವಹಿಸಲು ಆಮಂತ್ರಿಸುವುದರಿಂದ ಅವರಿಗೆ ಒಳ್ಳೆಯ ವ್ಯಾಪಾರವಾಗುತ್ತದೆ. ಹಾಗಾಗಿ ಅವರಿಗೆ ರುಡ್ ಸೆಟ್ ಸಂಸ್ಥೆಯಿಂದ ಬಲು ಅನುಕೂಲವಾಗುತ್ತದೆ ಎಂದು ಹೇಳಿಕೊಂಡರು.

Related posts

Leave a Reply

Your email address will not be published. Required fields are marked *