Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ : ’ಸಿರಿ’ಯ ಸೊಗಸು ಕಾಣಿಸಿದ ಕಲಂಕಾರಿ ಸೀರೆಗಳು

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದ ಪ್ರತಿಯೊಂದು ಅಂಶವು ಬಲು ಆಕರ್ಷಕ. ಅದರಲ್ಲೂ ವಸ್ತು ಪ್ರದರ್ಶನವು ನೆರೆದಿದ್ದ ಎಲ್ಲ ಜನರ ಮುಖ್ಯ ಆಕಷ ಣೀಯ ತಾಣವಾಗಿದ್ದು ವಿಭಿನ್ನ ಬಗೆಯ ಅಂಗಡಿ-ಮುಂಗಟ್ಟುಗಳು ಗ್ರಾಹಕರ ಗಮನಸೆಳೆದವು. ಪ್ರತಿಬಾರಿಯಂತೆ ಈ ಬಾರಿಯೂ ವಸ್ತುಪ್ರದರ್ಶನದಲ್ಲಿಯೂ ಕೂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿರುವ ಎಲ್ಲಾ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿದ್ದವು. ಅವುಗಳ ನಡುವೆ ಸಿರಿ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಹಾಕಿದ ಬಟ್ಟೆಗಳ ಮೇಳವು ಮಹಿಳೆಯರನ್ನು ತನ್ನತ್ತ ಸೆಳೆದುಕೊಂಡಿತು.
ಸಿರಿ ಈ ಬಾರಿ ಪ್ರಸ್ತುತಪಡಿಸಿದ ಹೊಸ ಬಗೆಯ ಕಲಂಕಾರಿ ಸೀರೆಗಳು, ಸೀರೆ ಪ್ರಿಯರಲ್ಲಿ ಸಂತಸ ಮೂಡಿಸಿದವು. ಕಲಂಕಾರಿ ಸೀರೆಗಳ ವಿಶೇಷವೆಂದರೆ ಅವುಗಳ ಮೇಲೆ ಮಾಡಿರುವ ವಿವಿಧ ಬಗೆಯ ಮುದ್ರಣಗಳು ಭಾರತೀಯ ಪರಂಪರೆಯನ್ನು ಬಿಂಬಿಸುವಂತಹ ದೇವಾಲಯಗಳು, ರಥಗಳು, ದೇವತೆಗಳು ಹಾಗೂ ಬರಹಗಳಂತಹ ವಿಭಿನ್ನ ಬಗೆಯ ಮುದ್ರಣಗಳನ್ನು ಒಳಗೊಂಡಿರುತ್ತದೆ. ಈ ಮುದ್ರಣಗಳನ್ನು ಕಲ್ಲಚ್ಚುಗಳನ್ನು ಬಳಸಿಕೊಂಡು ಸಂಸ್ಥೆಯಲ್ಲಿರುವ ಮಹಿಳೆಯರೇ ಸಿದ್ಧಪಡಿಸಿರುವುದು ಮತ್ತೊಂದು ವಿಶೇಷ.  
ಅದಷ್ಟು ಅಲ್ಲದೆ ಬೇರೆ ಬಗೆಯ ಉಡುಪುಗಳ ಜೊತೆಗೆ ಖಾದಿ ಹಾಗೂ ಕಾಟನ್ ವಸ್ತುಗಳನ್ನು ಬಳಸಿ ತಯಾರಿಸಿದ ಶರ್ಟ್, ಮಕ್ಕಳ ಫ್ರಾಕ್, ಕುರ್ತಾ, ಸೀರೆಗಳು ಹಾಗೂ ದುಪ್ಪಟ್ಟಾಗಳು ಸಿರಿ ವಸ್ತ್ರ ಮೇಳದ ಮೆರಗನ್ನು ಹೆಚ್ಚಿಸಿದವು. ಸಿರಿ ಬಟ್ಟೆಗಳ ಬೆಲೆಯು ಗುಣಮಟ್ಟಕ್ಕೆ ತಕ್ಕಂತೆ ನಿಗದಿಪಡಿಸಲಾಗಿತ್ತು. ಕಲಂಕಾರಿ ಸೀರೆಗಳಿಗೆ 1200 ರಿಂದ 1500 ರೂಪಾಯಿ ಅ? ಬೆಲೆ ಇದೆ. ಕುರ್ತಾಗಳಿಗೆ 700 ರಿಂದ 900 ರುಪಾಯಂತೆ ಬೆಲೆ ನಿಗದಿಪಡಿಸಲಾಗಿತ್ತು.
ಸಿರಿ ಗ್ರಾಮೋದ್ಯೋಗದಲ್ಲಿ ವಸ್ತ್ರಗಳನ್ನು ಬಹುತೇಕ ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಿ ತಯಾರಿಸುವುದರಿಂದ ಅವುಗಳ ಗುಣಮಟ್ಟವೂ ಹೆಚ್ಚುವುದರ ಜೊತೆಗೆ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಅನುವಾಗುತ್ತದೆ. ಈ ಮೂಲಕ ಸ್ವಾವಲಂಬಿಗಳಾಗಿ ಬದುಕುವುದರ ಜೊತೆಗೆ ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಲು ಸಹಾಯ ಮಾಡಿಕೊಟ್ಟಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಸಿರಿಯವರ ಸಂಸ್ಥೆಗಳಿದ್ದು ಬೇರೆ ಬೇರೆ ಕಡೆ ಆಗುವ ಮೇಳಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಬೇರೆ ಸಮಯಗಳಲ್ಲಿ ಸಿರಿ ಅಂಗಡಿಗಳಿಗೆ ಸಿರಿ ಸಂಸ್ಥೆಯ ವಸ್ತ್ರಗಳನ್ನು ತಯಾರಿಸಿ ವಿತರಿಸುತ್ತಾರೆ. ಹೀಗೆ ರಾಜ್ಯಾದಂತ ಸಿರಿ ಹಂತ ಹಂತವಾಗಿ ಯಶಸ್ವಿಯಾಗುತ್ತಿದೆ.

Related posts

Leave a Reply

Your email address will not be published. Required fields are marked *