Header Ads
Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ : ಕೆ.ಎಸ್.ಆರ್.ಟಿ.ಸಿ ಹೆಚ್ಚುವರಿ ಬಸ್ ಸೌಲಭ್ಯ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಮೊದಲ ದಿನ ಭಕ್ತಜನರಉತ್ಸಾಹವನ್ನು ಸಂಕೇತಿಸಿತ್ತು. ಭಕ್ತಜನರ ಪ್ರಯಾಣ ಸೌಕರ್ಯದ ಸಲುವಾಗಿಕರ್ನಾಟಕರಾಜ್ಯರಸ್ತೆ ಸಾರಿಗೆ ನಿಗಮದ ಧರ್ಮಸ್ಥಳ ಡಿಪೋ ವಿಶೇಷ ಮುತುವರ್ಜಿವಹಿಸಿದ್ದು ವಿಶೇಷ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆಡಿಪೋಎಂದಿನ 165 ಬಸ್ಸಿನ ವ್ಯವಸ್ಥೆಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ 30 ವಿಶೇಷ ಸಂಚಾರಿ ಬಸ್ಸುಗಳ ಸೌಲಭ್ಯ ಕಲ್ಪಿಸಿಕೊಟ್ಟಿತ್ತು. ಭಕ್ತಜನರಲ್ಲಿ ಹರುಷ ಮೂಡಿಸಿದ್ದು, ಶ್ರೀ ಕ್ಷೇತ್ರದಉತ್ಸವಕ್ಕೆ ಮತ್ತಷ್ಟು ಪೂರಕವಾಗಿದೆ.
ಶಿರಾಡಿಘಾಟ್‌ಗೆ ಸಂಪರ್ಕಕಲ್ಪಿಸಲುಡಿಪೋದಿಂದ 15 ಹೆಚ್ಚುವರಿ ವಿಶೇಷ ಬಸ್ಸುಗಳ ಸಂಚಾರವಿತ್ತು. ಇನ್ನುಳಿದ 15 ಬಸ್ಸುಗಳು ಸ್ಥಳೀಯರ ಅನುಕೂಲಕ್ಕೆ ಮೀಸಲಾಗಿದ್ದವು. ಈ ಬಗ್ಗೆ ಧರ್ಮಸ್ಥಳ ಡಿಪ್ಪೋದ ಸಿಬ್ಬಂದಿ ವರ್ಗದ ಮುಖ್ಯಸ್ಥಜನಾರ್ದನಅವರು ಈ ಕುರಿತು ವಿವರಗಳನ್ನು ನೀಡಿದರು. “ಜನಸಂದಣಿಯಆಧಾರದ ಮೇಲೆ ಅಂದಾಜಿಸಿ ಬಸ್ಸಿನ ವ್ಯವಸ್ಥೆಯನ್ನುಒದಗಿಸಲಾಗುವುದು. ಸಂಜೆ 7 ಗಂಟೆಯ ನಂತರ ಸಾರ್ವಜನಿಕ ಪ್ರಯಾಣದ ಸಂಖ್ಯೆಕಡಿಮೆಯಾಗುವುದರಿಂದಅಗತ್ಯತೆಗೆತಕ್ಕಷ್ಟು ಬಸ್ಸುಗಳನ್ನು ಒದಗಿಸುವುದರಲ್ಲಿ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದರು. ಒಂದು ಬಸ್ಸಿಗೆ ಒಮ್ಮೆಯ ಪ್ರಯಾಣಕ್ಕೆ ಕನಿಷ್ಟ 50 ಸೀಟುಗಳು ಭರ್ತಿಯಾಗಬೇಕು. 1 ಕಿ.ಮೀ.ಗೆ ಸುಮಾರು 38 ರೂ ವೆಚ್ಚವಾಗುವುದರಿಂದಎರಡು ಮೂರು ಪ್ರಯಾಣಿಕರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುವುದಿಲ್ಲಎಂದರು.
ಉತ್ಸವದಎಲ್ಲಾ ದಿನಗಳಲ್ಲಿ ದಿಡುಪೆ,ಬೆಳಾಲು, ಶಿಶಿಲ, ಶಿಬಾಜೆ, ಪಟ್ರಮೆ, ಕೊಕ್ಕಡ, ನೆರಿಯ, ಗಂಡಿಬಾಗಿಲು ಮತ್ತು ಪುದುವೆಟ್ಟು ಹೀಗೆ ಅನೇಕ ಸ್ಥಳೀಯ ಗ್ರಾಮಗಳಿಗೆ ಎಂದಿನಂತೆ ನಿಗದಿತ ಸಮಯಕ್ಕೆ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ಚಾರ್ಮಾಡಿಘಾಟ್ ಬಂದ್‌ಆಗಿರುವಕಾರಣಎಕ್ಸ್‌ಪ್ರೆಸ್ ಬಸ್ಸುಗಳ ಸಂಚಾರಇಲ್ಲದಿರುವುದರಿಂದಚಾರ್ಮಾಡಿಯವರೆಗೂ ಸಾರ್ವಜನಿಕರಿಗೆ ಸ್ಥಳೀಯ ಬಸ್ಸಿನ ವ್ಯವಸ್ಥೆಇದೆ. ಶಿರಾಡಿ ಘಾಟ್‌ನ ಮೂಲಕ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆಆಗಮಿಸುವ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳ ಸಂಚಾರ ವ್ಯವಸ್ಥೆಗೊಳಿಸಲಾಗಿದೆ.

Related posts

Leave a Reply

Your email address will not be published. Required fields are marked *