Header Ads
Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ : ರಂಜಿಸಿದ ಮಕ್ಕಳ ಭರತನಾಟ್ಯ

ದೇಶಿಯ ಸಂಸ್ಕೃತಿಯಲ್ಲಿ ಭರತನಾಟ್ಯಕ್ಕೆಅದರದ್ದೇಆದ ಮಹತ್ವ ಸ್ಥಾನವಿದೆ. ಭರತನಾಟ್ಯವು ನವರಸಗಳನ್ನು ಅತ್ಯದ್ಭುತವಾಗಿ ಪ್ರತಿಬಿಂಬಿಸುವ ನೃತ್ಯ ಪ್ರಕಾರವಾಗಿದೆ. ಕಲೆ ಎಂಬುವುದು ಎಲ್ಲರಿಗೆ ಒಲಿಯುವಂತದ್ದಲ್ಲಾ ತಾಳ್ಮೆ ಶ್ರಧ್ದೆಆಸಕ್ತಿಯ ಪ್ರತೀಕವೇಕಲೆಯ ಸ್ವರೂಪ. ಇಂತಹ ನೃತ್ಯ ಪ್ರಕಾರದ ವಿಶೇಷತೆಯನ್ನು ಮನಗಾಣಿಸುವಂತೆ ಧರ್ಮಸ್ಥಳದ ಲಕ್ಷದೀಪೋತ್ಸವದ ವಸ್ತು ಪ್ರದರ್ಶನ ವೇದಿಕೆಯಲ್ಲಿಪ್ರದರ್ಶನ ನೀಡಿದವರುಬೆಂಗಳೂರಿನ ನಂದಿನಿ ಲೇಔಟ್‌ನ ’ನಾಟ್ಯಕಲಾ ಮೈತ್ರಿ ಸ್ಕೂಲ್‌ಆಫ್‌ಡ್ಯಾನ್ಸ್‌ನ ಪುಟಾಣಿ ವಿದ್ಯಾರ್ಥಿನಿಯರ ವೃಂದ.
ತುಳಸಿ ವನಂ ಸಂಗೀತ ಸಂಯೋಜನೆಯ ’ಭಜಮಾನಸಂ’ ಎಂಬ ಕುಚುಕುಡಿ ಶೈಲಿಯ ವಿನಾಯಕ ಸ್ತುತಿಯ ನೃತ್ಯದಿಂದ ಈ ನೃತ್ಯಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಸ್ವಾಮಿ ದೀಕ್ಷಿತರು, ದಯಾನಂದ ಸರಸ್ವತಿ, ಸ್ವಾಮಿ ತಿರುನಾಳ, ಪುರಂದರದಾಸ, ದಯಾನಂದ ಸರಸ್ವತಿ, ಕನಕದಾಸರಂತಹ ಸಾಹಿತ್ಯ ದಿಗ್ಗಜರ ಹಾಡಿಗೆಗೆಜ್ಜೆಕಟ್ಟಿ ಪುಟಾಣಿ ಮಕ್ಕಳು ಹೆಜ್ಜೆ ಹಾಕಿದರು. ಮಹಾವಿಷ್ಣುವಿನ ದಶಾವತಾರದ ಪ್ರದರ್ಶನ ನೋಡುಗರ ಮೈ ರೋಮಾಂಚನಗೊಳಿಸಿತು. ತಲ್ಲಾಣ ನೃತ್ಯದೊಂದಿಗೆ ಭರತನಾಟ್ಯ ಸಂಪನ್ನಗೊಂಡಿತು.
ಹದಿನೆಂಟುಬಾಲ ಕಲಾವಿದರು ನೃತ್ಯ ಪ್ರದರ್ಶನ ನೀಡಿ ವೇದಿಕೆಯನ್ನುದೇವತಾಗೃಹವೆಂದು ಭಾವಿಸಿ ನೃತ್ಯದಲ್ಲಿತಲ್ಲೀನರಾಗಿದೇವರಿಗೆ ಮತ್ತು ನೆರೆದ ಭಕ್ತರಿಗೆ ಪುಷ್ಪ ಅರ್ಚಿಸಿ ಕುಣಿತಕ್ಕೆ ಅಣಿಇಟ್ಟರು. ಭೂಮಿತಾಯಿಗಾಗುವ ಪಾದಾಘಾತಕ್ಕೆಕಲಾವಿದರುಕ್ಷಮೆಯಾಚಿಸುತ್ತಾಕುಣಿಯುವ ಮೂಲಕ, ಗಣಪತಿ ಸ್ತುತಿಯೊಂದಿಗೆ ನೃತ್ಯಾರಂಭವಾಯಿತು. ವಿದ್ಯಾ, ಬುದ್ಧಿದಾತೆಯಾದ ಸರಸ್ವತಿಯ ಸ್ತುತಿದೇಹ, ಮನಸ್ಸುಗಳ ಅರಳಿಸುವ ವ್ಯಾಯಾಮರೂಪದ ನೃತ್ಯವಾದ ’ಅಲರಿಪು’ ಪ್ರದರ್ಶನಗೊಂಡಿತು.ಜತಿ ವಿನ್ಯಾಸದಜತಿಸ್ವರ ನೃತ್ಯಬಂಧ, ನಾಡದೇವಿ ಚಾಮುಂಡೇಶ್ವರಿಯ ಅವತಾರಗಳನ್ನು ಬಿಂಬಿಸುವ ನೃತ್ಯಗಳು ಕಲಾಭಿಮಾನಿಗಳ ಮನ ಮುಟ್ಟುವಂತೆ ನಡೆಯಿತು. ಶ್ರೀ ಕೃಷ್ಣನ ಬಾಲಲೀಲೆಗಳಾದ ಪೂತನ ಸಂಹಾರ, ಧೈರ್ಯ, ಸ್ಥೈರ್ಯ, ತುಂಟಾಟ ಮತ್ತು ಮಹಾಭಾರತದಗೀತೋಪದೇಶದ ’ಪದವರ್ಣ’ವೆಂಬ ಅಭಿನಯ ನೋಡುಗರ ಮನಸೂರೆಗೊಂಡಿತ್ತು. ನಾಟ್ಯದೇವ ನಟರಾಜ ಪರಮೇಶ್ವರನ ಭಕ್ತರ ಮೇಲಿನ ಕರುಣೆ ಮತ್ತು ಶಿವ ಲೀಲೆಗಳನ್ನು ನೃತ್ಯದ ಮೂಲಕ ಮಾಡಿದ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ಭರತನಾಟ್ಯದಕೊನೆಯದಾಗಿ ನರ್ತಿಸುವ, ಸಾಹಿತ್ಯದಿಂದಕೂಡಿದ ’ತಿಲ್ಲಾನ’ ನೃತ್ಯ ಶೈಲಿ ನೃತ್ಯಪ್ರದರ್ಶನಕ್ಕೆಇತಿ ಶ್ರೀ ಹಾಡಿತು.

Related posts

Leave a Reply

Your email address will not be published. Required fields are marked *