Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ : ರಂಜಿಸಿದ ಶಿವಪಾರ್ವತಿ ಪುರಾಣಕಥಾನೃತ್ಯ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತಆಯೋಜಿತ ಸಾಂಸ್ಕೃತಿಕಕಾರ್ಯಕ್ರಮದಲ್ಲಿಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಶಿವಪಾರ್ವತಿ ಪುರಾಣಕಥನಕ್ಕೆ ಸಂಬಂಧಿಸಿದ ವಿವಿಧ ಪ್ರಸಂಗಗಳ ಆಧಾರಿತ ನೃತ್ಯ ಹಲವರನ್ನು ರಂಜಿಸಿತು. ಶಿವ ಹಾಗೂ ಪಾರ್ವತಿಯದಾಂಪತ್ಯಜೀವನವನ್ನುಕಾಣಿಸಿದರು ಶಿವ ಹಾಗೂ ಗಂಗೆಯಅನ್ಯೋನ್ಯತೆಯನ್ನು ಸಾರಿದರು.
ಕೊಲ್ಲೂರು ಮೂಕಾಂಬಿಕೆ, ಮೈಸೂರುಚಾಮುಂಡೇಶ್ವರಿ, ಶೃಂಗೇರಿ ಶಾರದೆ, ಹೊರನಾಡುಅನ್ನಪೂರ್ಣಶ್ವರಿ ಸೇರಿದಂತೆ ಪಾರ್ವತಿಯಒಂಬತ್ತು ಅವತಾರಗಳನ್ನು ತೋರುವ ಮೂಲಕ ರಾಕ್ಷಸನ ಸಂಹಾರವನ್ನುಕಣ್ಣಿಗೆ ನಾಟುವಂತೆಕಟ್ಟಿಕೊಟ್ಟರು.
ವಿವಿಧಭಾಷೆ, ಜನಾಂಗ, ವೇಷಭೂಷಣಗಳನ್ನು ಹೊಂದಿದ ಭಾರತದೇಶವು, ವಿವಿಧತೆಯಲ್ಲಿಏಕತೆಎನ್ನುವ ಸಂದೇಶವನ್ನುಕತಕ್, ಭರತನಾಟ್ಯ, ಮೋಹಿನಿ ಆಟಂ ನೃತ್ಯದಲ್ಲಿ ತೋರಿಸಿದರು.
ಐದನೇತರಗತಿಯಿಂದ ಹತ್ತನೇತರಗತಿಯವರೆಗೆ ವಿದ್ಯಾರ್ಥಿಗಳು ಶಿವನ ನಾನಾ ಅವತಾರವನ್ನು, ವೀರಗಾಸೆ ನೃತ್ಯವನ್ನುಜನರ ಮುಂದೆ ಪ್ರದರ್ಶಿಸಿದರು.ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆಯಉಪನ್ಯಾಸಕಿ ಆಶಾ ನಿರೂಪಿಸಿದರು.

 

Related posts

Leave a Reply

Your email address will not be published. Required fields are marked *