Header Ads
Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ: ಬಳಪದ ಕಲ್ಲಿನ ವಸ್ತುಗಳ ಮಹತ್ವ ಕಾಣಿಸಿದ ಮಳಿಗೆ

ಇಂದಿನ ಆಧುನಿಕಯುಗದಲ್ಲಿತಂತ್ರಜ್ಞಾನವೂ ಮುಂದುವರೆದಿದೆ. ಆಚಾರ-ವಿಚಾರದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲಿಯೂ ಬದಲಾವಣೆಯನ್ನು ನಾವು ಕಾಣಬಹುದು. ಪಾರಂಪರಿಕತೆಯನ್ನು ಉಳಿಸಿಕೊಂಡು ಬಂದಿರುವ ವಸ್ತು ಎಂದರೆ ಬಳಪದ ಕಲ್ಲು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಸ್ತು ಪ್ರದರ್ಶನದಲ್ಲಿಜನರ ಗಮನ ಸೆಳೆದದ್ದು ಬಳಪದ ಕಲ್ಲಿನವಸ್ತುಗಳ ಮಳಿಗೆ.

ಧರ್ಮಸ್ಥಳ ಸಮೀಪದಗೋಣಿಕಟ್ಟೆ ಹೌಸ್‌ಎಂಬ ಹಳ್ಳಿಯವರಾದ ರಾಘವೇಂದ್ರಕಳೆದ 20 ವರ್ಷಗಳಿಂದ ಈ ವಸ್ತುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇಆಧುನಿಕತಂತ್ರಜ್ಞಾನದ ಯಂತ್ರಗಳನ್ನು ಬಳಸದೇ ಗುಡಿ-ಕೈಗಾರಿಕೆಯ ಉಪಕರಣಗಳನ್ನು ಬಳಸಿ, ಭೂಮಿಯಿಂದ ಬಳಪದ ಕಲ್ಲನ್ನುಭೂಮಿಯಿಂದಹೊರತೆಗೆಯುತ್ತಾರೆ.


ದೊಡ್ಡ ಕಲ್ಲುಗಳನ್ನು ಗರಗಸದಿಂದ ಬೇಕಾದಗಾತ್ರಕ್ಕೆಕೊಯ್ಯುತ್ತೇವೆ. ನಂತರಅದರಲ್ಲಿದೋಸೆಹಂಚು, ರೊಟ್ಟಿ ಹಂಚು, ಪಡ್ಡುವಿನ ಹಂಚು, ನೀರುದೋಸೆ ಹಂಚು ಹೀಗೆ ನಾನಾ ಬಗೆಯ ಪಾತ್ರೆಗಳನ್ನು ತಯಾರಿಸುತ್ತೇವೆ. ಯಂತ್ರಗಳ ಬದಲುಗರಗಸ, ಉಳಿ, ಸುತ್ತಿಗೆ ಮಾತ್ರ ಬಳಸುತ್ತೇವೆ. ಆ ಕಲ್ಲಿಗೆಆಕಾರಕೊಟ್ಟ ನಂತರಉಪ್ಪಿನಕಾಗದದಲ್ಲಿಉಜ್ಜಿ ಪಾಲೀಶ್ ಮಾಡಿ ವ್ಯಾಪಾರಕ್ಕೆಕೊಡಲಾಗುತ್ತದೆ. ಒಂದು ವಸ್ತುವನ್ನುತಯಾರಿಸಲುಒಂದೂವರೆಯಿಂದಎರಡುತಾಸು ಬೇಕಾಗುತ್ತದೆ ಎಂದು ತಿಳಿಸಿದರು.


ಈಗ ಗ್ಯಾಸ್ ಒಲೆಗಳನ್ನು ಬಳಸುವುದರಿಂದ ಗ್ಯಾಸ್ ಒಲೆಗಳ ಗಾತ್ರಕ್ಕೆತಕ್ಕಷ್ಟುಚಿಕ್ಕದಾಗಿ ಮತ್ತು ತೆಳುವಾಗಿ ವಸ್ತುಗಳನ್ನು ತಯಾರಿಸಲಾಗುತ್ತದೆ. ಆಗ ಬೇಡಿಕೆಯ ಪ್ರಮಾಣ ಹೆಚ್ಚಾಗುತ್ತದೆ. ಒಂದು ಸಲ ಈ ಬಳಪದ ಕಲ್ಲಿನವಸ್ತುಗಳಲ್ಲಿ ಮಾಡಿದಅಡಿಗೆರುಚಿ ಸವಿದವರುಯಾವುದೇಕಾರಣಕ್ಕೂ ನಾನ್‌ಸ್ಟಿಕ್ ಪಾತ್ರೆಗಳಲ್ಲಿ ಮಾಡಿದಅಡುಗೆಇಷ್ಟಪಡುವುದಿಲ್ಲಎಂದುಅವರು ಹೇಳಿದರು.

ಧರ್ಮಸ್ಥಳದಲ್ಲಿ ನಡೆಯುವ ಕೃಷಿ ಮೇಳ, ಜಾತ್ರೆಗಳಲ್ಲಿ, ಅಭಿವೃದ್ಧಿ ಯೋಜನೆಗಳು ನಡೆಸುವ ಸಮ್ಮೇಳನಗಳಲ್ಲಿ ಮಳಿಗೆಗಳ ಮೂಲಕ ಇದನ್ನು ಮಾರಲಾಗುತ್ತದೆ. ನಗರ ಪ್ರದೇಶಗಳಲ್ಲಿನ ವ್ಯಾಪಾರಸ್ಥರಿಗೆ ಹೋಲ್‌ಸೇಲ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಕಾಲ ಬದಲಾದರೂಈ ವಸ್ತುಗಳ ಬೇಡಿಕೆಹೆಚ್ಚಾಗುತ್ತಿರುವುದನ್ನುಈ ಮಳಿಗೆ ನಿರೂಪಿಸಿತು.

ವರದಿ: ಸುಮುಖ ಹೆಗಡೆ
ಚಿತ್ರಗಳು: ಸಾನಿಯಾ

 

Related posts

Leave a Reply

Your email address will not be published. Required fields are marked *