Header Ads
Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ: ಸುಸ್ವರ ತಂಡದಿಂದ ಭರತನಾಟ್ಯ ವೈಭವ

 

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಲಲಿತೋದ್ಯಾನ ಉತ್ಸವ ಗರಿಗೆದರಿದ ಆ ಪುಣ್ಯ ಸಮಯದಲ್ಲಿ ದೇವಳದ 2 ವೇದಿಕೆಗಳಲ್ಲಿ ನಡೆದ ಭರತನಾಟ್ಯಗಳ ವೈಭವ ಉತ್ಸವದ ಕಳೆ ಹೆಚ್ಚಿಸಿತ್ತು, ಭಕ್ತ ಸಾಗರದ ಕಣ್ಮನ ತಣಿಸಿತ್ತು. ಶ್ರೀ ಕ್ಷೇತ್ರದ ಅಮೃತವರ್ಷಿಣಿ ಕಲಾ ಭವನದಲ್ಲಿ ಬೆಂಗಳೂರಿನ ಸುಸ್ವರ ಸಂಗೀತ ನೃತ್ಯ ಶಾಲೆಯ ತಂಡದವರು ಭರತನಾಟ್ಯ ನಡೆಸಿಕೊಟ್ಟರು.


’ಭಜಮಾನಸಂ’ ಎಂಬ ಕೂಚುಪುಡಿ ಶೈಲಿಯ ವಿನಾಯಕ ಸ್ತುತಿಯ ನೃತ್ಯದಿಂದ ಆರಂಭಗೊಂಡಿತು. ಸ್ವಾಮಿ ದೀಕ್ಷಿತರು, ದಯಾನಂದ ಸರಸ್ವತಿ, ಸ್ವಾಮಿ ತಿರುನಾಳ, ಪುರಂದರ ದಾಸ, ದಯಾನಂದ ಸರಸ್ವತಿ, ಕನಕದಾಸರಂತಹ ಸಾಹಿತ್ಯ ದಿಗ್ಗಜರ ಹಾಡಿಗೆ ಹೆಜ್ಜೆ ಹಾಕಿದರು. ಮತ್ಸ್ಯಾವತಾರ, ಕೂರ್ಮಾವತಾರ, ವರಾಹಾವತಾರ, ನರಸಿಂಹಾವತಾರ, ವಾಮನಾವತಾರ, ಪರಶುರಾಮ, ಶ್ರೀ ರಾಮ, ಕೃಷ್ಣ, ಗೌತಮ ಮತ್ತು ಕಲ್ಕಿ ಎಂಬ ಮಹಾವಿಷ್ಣುವಿನ ದಶಾವತಾರದ ಪ್ರದರ್ಶನ ನೋಡುಗರ ಮೈ ರೋಮಾಂಚನ ಗೊಳಿಸಿತು.


ನಂತರ ವಸ್ತು ಪ್ರದರ್ಶನ ಮೈದಾನದ ವೇದಿಕೆಯಲ್ಲಿ ನಾಟ್ಯಕಲಾ ಮೈತ್ರಿ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಿತು. 18 ಬಾಲ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ವಿದ್ಯಾ, ಬುದ್ಧಿದಾತೆಯಾದ ಸರಸ್ವತಿಯ ಸ್ತುತಿ ದೇಹ, ಮನಸ್ಸುಗಳ ಅರಳಿಸುವ ವ್ಯಾಯಾಮ ರೂಪದ ನೃತ್ಯವಾದ ’ಅಲರಿಪು’ ಪ್ರದರ್ಶಿಸಿದರು. ಜತಿ ವಿನ್ಯಾಸದ ಜತಿಸ್ವರ ನೃತ್ಯಬಂಧ, ನಾಡ ದೇವಿ ಚಾಮುಂಡೇಶ್ವರಿಯ ಅವತಾರಗಳನ್ನು ಬಿಂಬಿಸುವ ನೃತ್ಯಗಳು ಭಕ್ತರ ಚಪ್ಪಾಳೆಗಳನ್ನು ಪಡೆದವು.
ಶ್ರೀ ಕೃಷ್ಣನ ಬಾಲಲೀಲೆಗಳಾದ ಪೂತನಿ ಸಂಹಾರ, ಧೈರ್ಯ, ಸ್ಥೈರ್ಯ, ತುಂಟಾಟ ಮತ್ತು ಮಹಾಭಾರತದ ಗೀತೋಪದೇಶದ ’ಪದವರ್ಣ’ವೆಂಬ ಅಭಿನಯ ನೋಡುಗರ ಮನಸೂರೆಗೊಂಡಿತ್ತು. ನಾಟ್ಯ ದೇವ ನಟರಾಜನಾದ ಪರಮೇಶ್ವರನ ಕರುಣೆ ಮತ್ತು ಶಿವಲೀಲೆಗಳನ್ನು ನೃತ್ಯದ ಮೂಲಕ ಕಾಣಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ತಂಡದ ಮುಖ್ಯಸ್ಥರನ್ನು ಡಾ. ಬಿ ಯಶೋವರ್ಮ ಸನ್ಮಾನಿಸಿ ಗೌರವಿಸಿದರು.

ವರದಿ: ದಿನೇಶ ಎಂ
ಚಿತ್ರಗಳು: ಅಭಿರಾಮ್ ಶರ್ಮ

 

Related posts

Leave a Reply

Your email address will not be published. Required fields are marked *