

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಪುತ್ತೂರಿನ ಶ್ರೀ ಜನಾರ್ಧನ ಬಿ ನೇತೃತ್ವದ ಸ್ವರ ಮಾಧುರ್ಯ ಸಂಗೀತ ಬಳಗವು ಸುಗಮ ಸಂಗೀತಕಾರ್ಯಕ್ರಮ ನಡೆಸಿಕೊಟ್ಟಿತು.ದೇವರಿಗೆ ನಮಸ್ಕರಿಸುವ ಭಕ್ತಿಗೀತೆಯಾದ ಶರಣು ಬೆನಕನೆ ಶರಣು ಶರಣು ಹೇ ಬೆನಕನೆ ನಿನಗೆ ವಂದನೆ ಎಂಬ ಗಣೇಶ ಸ್ತುತಿಯೊಂದಿಗೆಕಾರ್ಯಕ್ರಮ ಆರಂಭಿಸಿ, 30 ವರ್ಷದ ಹಿಂದೆ ಬಂದಿರುವ ಮಧುರಗೀತೆ ಶಂಕರ ನಾದ ಶರೀರ ಪದ ವೇದ ಎಂಬ ಸಹಸ್ರನಾಮ ಲಿಂಗೇಶ್ವರನನ್ನು ನೆನೆಯುವಂತೆ ಮಾಡಿದರು. ಡಾ. ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬಕ್ಕೆ ಶುಭವನ್ನುಕೋರಿದರು.
ಗಾಯಕಿಕುಮಾರಿ ಸವಿತ ಪುತ್ತೂರು ನ್ಯಾಯ ನೀತಿ ಮೂರ್ತಿ ಸತ್ಯ ಎಂಬ ಮಧುರಗೀತೆ ಮೂಲಕ ಮಂಜುನಾಥನನ್ನುಕೊಂಡಾಡಿದರು. ಆನಂದ ಪರಮಾನಂದಗೀತೆಯನ್ನುಪ್ರಸ್ತುತಪಡಿಸಿ
ಜನಾರ್ದನ ಪುತ್ತೂರುಅವರುತಬಲಾ ವಾದಕರಾಗಿ ಸಾಥ್ ನಿಡಿದರು. ರಿದಂ ವಾದಕರಾಗಿ ಸಚಿನ್ ಪುತ್ತೂರು ಹಾಗೂಕೀಬೋರ್ಡ ವಾದಕರಾಗಿ ಅಶ್ವಿನ್ ಅವರು ಸಾಥ್ನೀಡಿದರು .