Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : ಆಕರ್ಷಿಸಿದ ಮುಟ್ಟಾಳೆಯ ಮಳಿಗೆ

ಜನಮನದಿಂದ ಮರೆಯಾಗುತ್ತಿರುವಅಡಿಕೆ ಹಾಳೆಯ ಮುಟ್ಟಾಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತು ಪ್ರದರ್ಶನದಲ್ಲಿಎರಆಕರ್ಷಣೆಗೆ ಪಾತ್ರವಾಗಿದೆ.ಈ ಕರಕುಶಲ ವಸ್ತು ಕೃಷಿಕರಿಗೆಅಚ್ಚುಮೆಚ್ಚಿನದಾಗಿದೆ.ದಕ್ಷಿಣಕನ್ನಡದಲ್ಲಿಬಿಸಿಲಿನ ಬೇಗೆಯಲ್ಲಿ ಮನೆಯ ಹೊರಗಿನಗದ್ದೆ, ತೋಟ, ಹಿತ್ತಲಿನಲ್ಲಿದುಡಿಯುವುದೇ ಹೆಚ್ಚು. ಆ ಬಿಸಿಲಿನ ತಾಪವನ್ನು ತಡೆದುಕೊಳ್ಳಲು ಉಪಕಾರಿಯಾಗಿರುವುದೇಅಡಿಕೆ ಹಾಳೆಯಿಂದ ತಯಾರಿಸಲಾದಟೋಪಿ ಮುಟ್ಟಾಳೆ.

ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಬಾಬು ನಲ್ಕೆ ಮತ್ತು ಪತ್ನಿಎಲ್ಯಪ್ಪೆಇವರ ಕೈಚಳಕದಿಂದ ಮುಟ್ಟಾಳೆ ತಯಾರಿಸಿ  ಮೂವತ್ತು ವರ್ಷದಿಂದ ಮಾರಾಟ ಮಾಡುತ್ತಿದ್ದಾರೆ. ಐದು ವರ್ಷಗಳಿಂದ ಲಕ್ಷ ದೀಪೋತ್ಸವದಲ್ಲಿತಮ್ಮದೇ ಮಳಿಗೆಯಲ್ಲಿ ಮುಟ್ಟಾಳೆ ಮಾರಾಟ ಮಾಡುತ್ತಿದ್ದು ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಅಡಿಕೆ ಮರದಿಂದ ಬೀಳುವ ಹಾಳೆಗಳನ್ನು ಸಂಗ್ರಹಿಸಿ ತಂದು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸುತ್ತಾರೆ. ನಂತರಎರಡು ಹಾಳೆಗಳನ್ನು ಜೋಡಿಸಿ, ಕತ್ತಿಯಿಂದತಿವಿದುತಲೆಯ ಅಳತೆಗೆ ತಕ್ಕಹಾಗೆಕತ್ತರಿಸಿ ಎರಡೂಕಡೆಯ ಅಂಚುಗಳನ್ನು ಬೆರಳುಗಳಿಂದ ಬಿಗಿಯಾಗಿ ಹಿಡಿದು ಹಾಳೆಯ ತುದಿಗಳನ್ನು ಸಣ್ಣಗೆ ನೆರಿಗೆ ಮಾಡಿಉದ್ದವಾದ ಸೂಜಿ ಮತ್ತುಗಟ್ಟಿಯಾದ ಪ್ಲಾಸ್ಟಿಕ್ ದಾರದ ಸಹಾಯದಿಂದ ಹೊಲಿಯುತ್ತಾರೆ. ಇನ್ನುಟೋಪಿಯ ಸುತ್ತಲೂ ಉಲನ್ ದಾರದಿಂದ ವಿವಿಧ ಚಿತ್ರಗಳನ್ನು ಅದರ ಮೇಲೆ ಬಿಡಿಸಿ ಮುಟ್ಟಾಳೆಗೆ ಮತ್ತಷ್ಟು ಮೆರುಗು ನೀಡುತ್ತಾರೆ.

ಇಳಿವಯಸ್ಸಿನ ಈ ದಂಪತಿತಮ್ಮ ಬಿಡುವಿನ ಸಮಯದಲ್ಲೂ ಮುಟ್ಟಾಳೆಗಳನ್ನು ತಯಾರಿಸಿ ಮಾರಾಟ ಮಾಡುವುದು ವಿಶೇಷ. ಈ ಆಧುನಿಕಯುಗದಲ್ಲೂಅಡಿಕೆ ಮರದಟೋಪಿಯನ್ನು ಜೀವಂತವಾಗಿರಿಸಿದ್ದಾರೆ. ಕರಕುಶಲ ವಸ್ತುಗಳ ಅಸ್ಥಿತ್ವ ಕಣ್ಮರೆಯಾಗಬಾರದುಎನ್ನುವುದುಇವರ ಮಾತು.

Related posts

Leave a Reply

Your email address will not be published. Required fields are marked *