Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : ಹಳ್ಳಿಯ ಅಂದ ನೆನಪಿಸಿದ ಮಡಿಕೆಯ ಮಳಿಗೆ

ಅಳಿವಿನಂಚಿರುವ ಹಳ್ಳಿಯ ಕಸುಬುಗಳನ್ನು ಉಳಿಸಿ ಬೆಳೆಸುವ ಸಂದೇಶವನ್ನುssಸಾರುತ್ತಾ, ಹಳ್ಳಿಯ ವಾತಾವರಣವನ್ನು ಸೃಷ್ಟಿಸಿದ ದೃಶ್ಯಕಂಡು ಬಂದದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಸಿದ್ಧ ಪಡಿಸಿರುವ ವಸ್ತುಪ್ರದರ್ಶನದ ಮಳಿಗೆಯಲ್ಲಿ.  ಈ ಮಳಿಗೆಯಲ್ಲಿದ್ದ ಮಣ್ಣಿನ ದಿನೋಪಯೋಗಿ ವಸ್ತುಗಳ ಪ್ರದರ್ಶನಆಕರ್ಷಣೀಯವಾಗಿತ್ತು. ಇದರರೂವಾರಿಕಾಯರ್‌ತಡ್ಕ ನಿವಾಸಿ ಸಂಜೀವ ಮತ್ತು ಕೇಶವ ಕುಂಬಾರ. ಈ ಹಿಂದೆ ಸುಮಾರು 18 ವರ್ಷದಿಂದ ಮೋಟಕುಂಬಾರ ಬರುತ್ತಿದ್ದರು. ಅವರು ಮರಣ ಹೊಂದಿದ್ದು, ಈ ವರ್ಷಅವರ ಮಕ್ಕಳು ಮುಂದುವರಿಸುತ್ತಿದ್ದಾರೆ.ಇವರುಸ್ವಂತಉದ್ಯೋಗ ನಡೆಸುವುದರ ಮೂಲಕ ತಮ್ಮಜೀವನವನ್ನು ಸುಖಮಯವಾಗಿಕಳೆಯುತ್ತಿದ್ದಾರೆ.  ಕೊಪ್ಪ ಮಣ್ಣನ್ನು ಬೆಂಕಿಯಿಂದ ಸುಟ್ಟು ಹದ ಮಾಡಿ, ಬೇಯಿಸಿ ತಮಗೆ ಬೇಕಾದರೂಪಕೊಟ್ಟುತಯಾರಿಸುತ್ತಾರೆ. ಕಟ್ಟಿಂಗ್ ಮಡಕೆಅಂದರೆ ಮಡಿಕೆಯ ಸುತ್ತಲೂಸುಂದರವಾದ ವಿನ್ಯಾಸದೊಂದಿಗೆತಯಾರಾಗುವ ಮಡಿಕೆಗಳು. ಒಂದು ದಿನಕ್ಕೆ ಇಂಥ ಮೂರು ಮಡಿಕೆಗಳನ್ನು ತಯಾರಿಸುತ್ತಾರೆ. ಹಾಗೇ ಕಟ್ಟಿಂಗ್‌ಇಲ್ಲದಆರುಮಡಿಕೆಗಳನ್ನು ತಯಾರಿಸುತ್ತಾರೆ.  ದಿಡುಪೆಯಿಂದ ಕೊಪ್ಪ ಮಣ್ಣನ್ನುತಂದು ಮನೆಯವರ ಸಹಕಾರದಿಂದಮಡಕೆ, ಹೂಜಿ, ತವ, ಲೋಬನ್, ಕುಂಭ ಹೀಗೆ ಸುಮಾರು ನಲವತ್ತೆರಡುರೀತಿಯವಸ್ತುಗಳನ್ನು ಮಣ್ಣಿನಲ್ಲಿತಯಾರಿಸುತ್ತಿದ್ದಾರೆ. ಇತ್ತೀಚೆಗೆ ಸಕಾಲದಲ್ಲಿ ಮಡಿಕೆ ಮಾಡಲು ಮಣ್ಣುಸಿಗದೆ ಸಮಸ್ಯೆಯುಂಟಾಗುತ್ತಿರುವುದು ಸುಳ್ಳಲ್ಲ. ಮೊದಲೆಲ್ಲಾಜೇಡಿ ಮಣ್ಣಿನಿಂದಮಡಿಕೆಗಳನ್ನು ತಯಾರಿಸುತ್ತಿದ್ದರು. ಆದರೆ ಈಗ ಜೇಡಿ ಮಣ್ಣು ಸಿಗದಿರುವುದರಿಂದ ಕೊಪ್ಪಮಣ್ಣಿನಿಂದಮಡಿಕೆತಯಾರಿಸುತ್ತಾರೆ. ಇವರು ತಯಾರಿಸಿದ ಮಡಿಕೆಯನ್ನುಯೋಜನೆಯಕೃಷಿ ಮೇಳಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗೆಯೇ ಹತ್ತಿರದ ಸುತ್ತ ಮುತ್ತಲಿನ ಹಳ್ಳಿಗಳಲ್ಲೂ ಮಾರಾಟ ಮಾಡುತ್ತಾರೆ.

 

Related posts

Leave a Reply

Your email address will not be published. Required fields are marked *