ಪುರಾತನ ದೇವಾಲಯಗಳು ಪುನರುತ್ಥಾನಗೊಳ್ಳುವುದು ಹೇಗೆ?ಇದಕ್ಕೆ ಸಂಬಂಧಿಸಿದಂತೆ ತಿಳಿದುಕೊಳ್ಳಬೇಕಿದ್ದರೆ ನೀವೊಮ್ಮೆಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ನಡೆಯುತ್ತಿರುವ ವಸ್ತು ಪ್ರದರ್ಶನ ಪ್ರಾಂಗಣಕ್ಕೆ ಬರಬೇಕು.’ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಧರ್ಮೋತ್ಥಾನಟ್ರಸ್ಟ್’ನ ಮಳಿಗೆ ಪ್ರವೇಶಿಸಬೇಕು. ಅಲ್ಲಿ ದೇವಾಲಯಗಳ ಕುರಿತ ವಿಸ್ತೃತ ಮಾಹಿತಿ ಸಿಗುತ್ತದೆ.ಧರ್ಮಸ್ಥಳ ಮಂಜುನಾಥೇಶ್ವರಧರ್ಮೋತ್ಥಾನವುಡಾ: ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 1991ರಲ್ಲಿಆರಂಭಗೊಂಡಿತು. ಮೊದಲ ಹತ್ತು ವರ್ಷಗಳಲ್ಲೇತನ್ನಉತ್ತಮಕಾರ್ಯದಮೂಲಕ ರಾಜ್ಯ ಸರ್ಕಾರದಗಮನವನ್ನು ಸೆಳೆಯಿತು. ನಂತರಇದಕ್ಕೆರಾಜ್ಯ ಸರ್ಕಾರದ ಸಹಬಾಗಿತ್ವ ಲಭ್ಯವಾಯಿತು.ದೇವಸ್ಥಾನದಜೀರ್ಣೋದ್ಧಾರಕಾಮಗಾರಿಗೆ ಶೇ.40ರಷ್ಟು ಧರ್ಮೋತ್ಥಾನಟ್ರಸ್ಟ್, ಶೇ.40ರಷ್ಟುರಾಜ್ಯ ಸರ್ಕಾರ ಮತ್ತು ಇನ್ನುಳಿದ ಶೇ.20 ರಷ್ಟುಖರ್ಚುವೆಚ್ಚವನ್ನುಸ್ಥಳೀಯರು ಭರಿಸುತ್ತಾರೆ. ಐತಿಹಾಸಿಕ ಸ್ಮಾರಕಗಳ ರಕ್ಷಣಾಕಾರ್ಯದಲ್ಲಿ ಸರ್ಕಾರದ ಸಹಭಾಗಿತ್ವ ವಹಿಸಿರುವ ಏಕೈಕ ಖಾಸಗಿ ಸಂಸ್ಥೆ ಇದಾಗಿದೆ. ಈ ತನಕರಾಜ್ಯದ 25 ಜಿಲ್ಲೆಗಳಲ್ಲಿ ಒಟ್ಟು 246ಪ್ರಾಚೀನ ದೇವಾಲಯಗಳನ್ನು ,ಹಾಸನದಲ್ಲಿ 47, ಮಂಡ್ಯದಲ್ಲಿ 25, ತೂಮಕುರುರಲ್ಲಿ 24, ಮೈಸೂರಲ್ಲಿ 20ಸೇರಿದಂತೆಒಟ್ಟು247 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ.ಎ.ಎಚ್.ಹರಿರಾಮ ಶೆಟ್ಟಿ ಅವರು ಧರ್ಮೋತ್ಥಾನ ಟ್ರಸ್ಟ್ನ ನಿರ್ದೇಶಕರಾಗಿ ಕಾರ್ಯನಿವಹಿಸುತ್ತಾ ಇದ್ದು, ಎ.ವಿ.ಶೆಟ್ಟಿ ಕಾರ್ಯದರ್ಶಿಗಳಾಗಿದ್ದಾರೆ. ಸಂಸ್ಥೆಯಲ್ಲಿಒಟ್ಟು ಏಳು ಗುಂಪುಗಳಿದ್ದು ತಲಾ ಹತ್ತುಜನರಂತೆ ಏಳು ಗುಂಪುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ದೀಪೋತ್ಸವಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆಇದು ವಿಶೇಷವಾಗಿ ಕಂಡಿದ್ದಂತು ನಿಜ. ಉಜಿರೆ ನಿವಾಸಿ ಹರೀಶ’ದೇವಾಲಯಜಿರ್ಣೋದ್ಧಾರ ನಿಜಕ್ಕೂಒಂದುಅದ್ಭುತ ಕೆಲಸ’ ಎಂದು ಹೊಗಳಿದರು.’ಹಾಳು ಬಿದ್ದಿರುವ ದೇವಸ್ಥಾನಗಳಿಗೆ ಮರುಜೀವತುಂಬಿದಂತಾಗಿದೆ. ನಾನೂ ಈ ಟ್ರಸ್ಟ್ನಲ್ಲಿಕಳೆದ ಎಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನಅವಧಿಯಲ್ಲಿಇಲ್ಲಿವರೆಗೆ ಸುಮಾರು 120 ದೇವಸ್ಥಾನಗಳ ಜೀರ್ಣೋದ್ಧಾರ ಕೆಲಸದಲ್ಲಿ ಭಾಗಿಯಾಗಿದ್ದೇನೆ’ ಎಂದವರು ಟ್ರಸ್ಟ್ನ ಹುಬ್ಬಳ್ಳಿ ವಲಯದಅಧೀಕ್ಷಕ ಮಹಾದೇವ.