Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : ದೇಶದ ಏಕತೆ ಸಾರಿದ ಗೀತಗಾಯನ

ಹಾಡೆಂಬುದು ಕೇವಲ ಮನೋರಂಜನೆಗೆ ಸೀಮಿತವಾಗಲ್ಲದೇ ಸಮಗ್ರಕಥಾವಸ್ತುವನ್ನುಕಟ್ಟುವ ಭಾಗವಾಗಬೇಕು.ಕಲೆಯನ್ನು ಪ್ರೀತಿಸುವ ಪ್ರತಿಯೊಬ್ಬರು ದೇಶಿ ಕಲೆಯನ್ನುಗೌರವಿಸುದರಜೊತೆಗೆಜನಪದ ಸೊಗಡನ್ನು ಪ್ರೋತ್ಸಾಹಿಸುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಡಿ.ಎಂ ಪ್ರೌಢ ಶಾಲಾ ಆವರಣದಲ್ಲಿಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿರುವವಸ್ತುಪ್ರದರ್ಶನ ಮಂಟಪದಲ್ಲಿ ಬೆಂಗಳೂರಿನ ಉಸ್ಮಾನ್‌ಕಲಾತಂಡದ 6 ಗಾಯಕರಿಂದಗೀತಗಾಯನಕಾರ್ಯಕ್ರಮವು ನೆರವೇರಿತು.
ಹಾಡುಗಳ ಮೂಲಕ ತತ್ವಪದದ ಸತ್ಯವನ್ನುಜನರಲ್ಲಿ ಬಿತ್ತರಿಸುತ್ತಿರುವಉಸ್ಮಾನ್‌ಕಲಾತಂಡವು ಹಲವಾರು ಕಡೆಗಳಲ್ಲಿ ತನ್ನಗಾಯನದಛಾಪನ್ನು ಮೂಡಿಸಿದ್ದು, ಸುಮಾರು ಹನ್ನೆರಡು ವರ್ಷಗಳಿಂದ ಕಲಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವಈತಂಡವುದೀಪೋತ್ಸವದಎರಡನೇ ದಿನವಾದ ಶನಿವಾರದಂದು,ಗೀತಗಾಯನಕಾರ್ಯಕ್ರಮವನ್ನು ನೀಡಿಜನಮೆಚ್ಚುಗೆ ಪಾತ್ರವಾಯಿತು. ದೇಶಿ ಹಾಡುಗಳಾದಂತಹಜನಪದ, ದೇವರನಾಮ, ಲಾವಣಿ, ಹಾಗೂ ಭಾವಗೀತೆಹಾಡುಗಳಿಗೆ ಸೀಮಿತವಾಗಿದ್ದ ಸ್ವರ ಮಾಧುರ್‍ಯಕಾರ್ಯಕ್ರಮವು ಕಲಾರಸಿಕರಿಗೆ ಹೊಸ ಅನುಭವ ನೀಡಿತು.
’ಬೆಟ್ಟದ ಮೇಲೊಂದು ಮನೆಯ ಮಾಡಿ’ಜನಪದ ಶೈಲಿಯ ಹಾಡು ಹುಲಿಕಲ್ಲು ನಾಗರಾಜ್‌ಅವರಧ್ವನಿಯಲ್ಲಿ ಮೂಡಿಬಂದಿತು. ತಂಡದ ನಿರ್ದೇಶಕಉಸ್ಮಾನ್’ಯಾರ ಹೊಲ ಯಾರ ಮನಿ’ಗೀತೆಯನ್ನು ಹಾಡಿದರೆ, ಅವರಇಬ್ಬರು ಮಕ್ಕಳಾದ ಅಫೀಜಾ ಮತ್ತುಅಫೀಫ,’ಚೆನ್ನಪ್ಪಚೆನ್ನಗೌಡ’ಜನಪದಗೀತೆಗೆಸ್ವರ ನೀಡಿದರು. ’ದೇವಾ ಮಾದೇವ ಬಾರೋ’ ’ ಭಜಕಿ ಗೋಪಾಲ’ ಹಾಗೂ ನಿಸಾರ್‌ಅಹಮ್ಮದ್‌ರಚನೆಯ’ಜನನಿ ಚೈತನ್ಯಅನಿಕೇತನ’ ಹಾಡುಗಳ ಮೂಲಕ ಗಾಯಕರುಜನರನ್ನು ರಂಜಿಸಿದರು.
ಉಸ್ಮಾನ್‌ತಮ್ಮ ಸಮಗ್ರಕಾರ್ಯಕ್ರಮದಕುರಿತು ಅನಿಸಿಕೆಯನ್ನು ಹಂಚಿಕೊಂಡರು.ವಿವಿಧತೆಯಲ್ಲಿಏಕತೆಯನ್ನುಕಾಣುವದೇಶ ನಮ್ಮದು. ಇಲ್ಲಿ ಸಾಂಪ್ರದಾಯಕತೆಯನ್ನು ಬಿತ್ತಿ ಬೆಳೆಸಲು ಯುವಜನತೆಯಬೆಂಬಲ ಮಹತ್ವದ್ದಾಗಿದೆ. ಭಾರತದೇಶದಲ್ಲಿ ದೇಶೀಯ ಕಲೆಗಳುಇತ್ತೀಚೆಗೆ ನಶಿಸಿ ಹೋಗುತ್ತಿದ್ದು, ದೇಶಿಕಲೆಯನ್ನುಯುವಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗುವಂತೆ ಮಾಡುವುದು ನಮ್ಮ ಪ್ರಯತ್ನ ಎಂದು ಅಭಿಪ್ರಾಯಪಟ್ಟರು.

 

Related posts

Leave a Reply

Your email address will not be published. Required fields are marked *