Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : ಶಾಂತಿ ಸಂದೇಶ ಸಾರಿದ ಪೌರಾಣಿಕ ನೃತ್ಯ ರೂಪಕ

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತಅಮೃತವರ್ಷಿಣಿ ಸಭಾಂಗಣದಲ್ಲಿಖ್ಯಾತ ಚಲನಚಿತ್ರಕಲಾವಿದೆ ಎಂ. ಶಾಂತಲಾ ಹಾಗೂ ಸಂಗಡಿಗರುಭಾನುವಾರಪ್ರಸ್ತುತಪಡಿಸಿದ ನೃತ್ಯರೂಪಕವು ಶಾಂತಿಯ ಮೌಲಿಕ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು. ಪುರಾಣದ ವಿವಿಧ ಪ್ರಸಂಗಗಳ ಮೂಲಕ ಸಂಘರ್ಷವನ್ನುಎದುರಿಸುವ ಬಗೆಯನ್ನು ಕಾಣಿಸಿತು. ಅನ್ಯಾಯದ ವಿರುದ್ಧದ ಹೋರಾಡುವಚಿತ್ರಣವನ್ನುಕಟ್ಟಿಕೊಟ್ಟಿತು. ಸಾವನೇ ಗೆಲ್ಲಬೇಕುಎಂದು ಬ್ರಹ್ಮನಲ್ಲಿ ಇಚ್ಛೆ ಇಡುವ ಶುಂಭ-ನಿಶುಂಭರ ಬೇಡಿಕೆಯನ್ನು ನಿರಾಕರಿಸಿದ ಬ್ರಹ್ಮನ ಬಳಿ ಮತ್ತೊಂದು ಬೇಡಿಕೆಇಡುತ್ತಾರೆ, ತಾಯಿಗರ್ಭದಲ್ಲಿ ಜನಿಸಿರದವಳಿಂದ ಮರಣ ಪ್ರಾಪ್ತಿಯಾಗಬೇಕೆಂಬ ಪ್ರಸ್ತಾಪ ಮನ್ನಿಸಿಅವರಅಪೇಕ್ಷೆಯಂತೆ ಬ್ರಹ್ಮ ವರ ನೀಡುತ್ತಾನೆ.ತದನಂತರಅಟ್ಟಹಾಸದಿಂದ ಶುಂಭ-ನಿಶುಂಭರು ಮೆರೆಯುತ್ತಾರೆ. ಅವರನ್ನು ನಿಯಂತ್ರಿಸಿ ಸಂಹರಿಸುವ ಹೊಣೆಜಗನ್ಮಾತೆಯದ್ದಾಗುತ್ತದೆ. ಆ ಹೊಣೆ ನಿಭಾಯಿಸುವಜಗನ್ಮಾತೆಯು ಹಿಂಸೆಗೆ ಒಳಗಾಗಿದ್ದ ಧರ್ಮವನ್ನುಕಾಪಾಡುವಬಗೆ ಆಪ್ತವಾಗಿ ಈ ನೃತ್ಯರೂಪಕದ ಮೂಲಕ ಅನಾವರಣಗೊಂಡಿತು.
ಕಲೆಯ ಸನಾತನ ಪರಂಪರೆಯಾದ ಶಿವಗೀತೆಯ ಮೂಲಕ ನೃತ್ಯರೂಪಕವನ್ನು ಆರಂಭಿಸಿದರು. ಪರಮೇಶ್ವರನ ವಿಶ್ವರೂಪದರ್ಶನ ಬಿಂಬಗಳು ಆಕರ್ಷಣೀಯವಾಗಿದ್ದವು.ತಮ್ಮಶಿವಗೀತೆ ಆಧಾರಿತನೃತ್ಯಶೈಲಿಯ ಮೂಲಕ ಭರತನಾಟ್ಯಕಲಾವಿದ ಸಂತೋಷ್ ಮನಸೆಳೆದರು. ಕಾರ್ಯಕ್ರಮದಲ್ಲಿ ಎಂ. ಶಾಂತಲಾ, ಸುನಿಲ್, ಪೃಥ್ವಿಕ್, ರಚನ, ನಾಗಶ್ರೀ, ಸ್ನೇಹ, ಭರತ್, ಸೀತಾರಾಮನ್‌ಅವರ ನೃತ್ಯ ವೈಖರಿ ಭಿನ್ನವಾಗಿತ್ತು. ತಂಡದ ಸದಸ್ಯರನ್ನುಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನಸ್ವಾಗತ ಸಮಿತಿಉಪಾಧ್ಯಕ್ಷಡಿ. ಸುರೇಂದ್ರಕುಮಾರ್ ಸನ್ಮಾನಿಸಿ, ಗೌರವಿಸಿದರು.

Related posts

Leave a Reply

Your email address will not be published. Required fields are marked *