Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : ಯಾಂತ್ರೀಕೃತ ಭತ್ತ ಬೇಸಾಯದ ಮಾದರಿ

ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಪ್ರಾಂಗಣದಲ್ಲಿಯಾಂತ್ರೀಕೃತ ಭತ್ತ ಬೇಸಾಯದವಿಧಾನಗಳನ್ನು ವಿವರಿಸುವಮಾದರಿಯುಜನತೆಯ ಮನ್ನಣೆಗೆ ಪಾತ್ರವಾಗಿದೆ.  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯುಭತ್ತ ಬೇಸಾಯದಯಾಂತ್ರೀಕೃತ ವಿಧಾನವನ್ನುಜನರಿಗೆತಿಳಿಸುವ ಕಾರ್ಯ ಮಾಡುತ್ತಿದೆ.ಪ್ರಸ್ತುತ ಹೆಚ್ಚುತ್ತಿರುವ ಬೇಸಾಯದಖರ್ಚು ಹಾಗೂ ವಾಣಿಜ್ಯ ಬೆಳೆಗಳ ತೀವ್ರಆಕರ್ಷಣೆಯಿಂದರೈತರು ಭತ್ತ ಬೇಸಾಯದಿಂದ ವಿಮುಖರಾಗುತ್ತಿರುವ ಹಿನ್ನಲೆಯಲ್ಲಿ ಪರಿಹಾರವೆಂಬಂತೆ ಬೇಸಾಯ ವೆಚ್ಚವನ್ನು ನಿಯಂತ್ರಿಸಿ, ಇಳುವರಿಯನ್ನು ಹೆಚ್ಚಳ ಮಾಡುವುದಷ್ಟೇ ಅಲ್ಲದೆ ಭೂಮಿ ಹದಗೊಳಿಸುವುದರಿಂದ ಮೊದಲ್ಗೊಂಡು ಕೊಯ್ಲೋತ್ತರದವರೆಗೆ ಯಾಂತ್ರೀಕೃತ ವಿಧಾನದಲ್ಲಿ ಬೇಸಾಯ ಮಾಡುವ ವಿನೂತನ ಮಾದರಿಯ ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಹಸಿರೆಲೆ ಗೊಬ್ಬರಕ್ಕಾಗಿಟ್ರ್ಯಾಕ್ಟರ್‌ಚಾಲಿತಡಿಸ್ಕ್ ನೇಗಿಲು, ಭೂಮಿತಯಾರಿಗಾಗಿಟ್ರ್ಯಾಕ್ಟರ್‌ಚಾಲಿತಕಲ್ಟಿವೇಟರ್, ಟಿಲ್ಲರ್, ನರ್ಸರಿತಯಾರಿಗಾಗಿ ಟ್ರೇಗಳು, ಸಸಿಗಳ ನಾಟಿಗಾಗಿ ನಾಟಿಯಂತ್ರ, ಕಳೆ ನಿರ್ವಹಣೆಗಾಗಿ, ಮಾನವಚಾಲಿತ ಅಥವಾಯಾಂತ್ರೀಕೃತ ಕೋನೋವೀಡರ್‌ಕೊಯ್ಲಿಗಾಗಿರೀಪರ್‌ಅಥವಾಯಾಂತ್ರೀಕೃತಕೋನೋವೀಡರ್, ಒಕ್ಕಣೆಗಾಗಿಒಕ್ಕಣೆಯಂತ್ರಇವೆಲ್ಲಜನರಿಗೆ ಸಹಕಾರಿಯಾಗುತ್ತದೆ. ಸಾಂಪ್ರದಾಯಿಕ ವಿಧಾನವನ್ನುಅನುಸರಿಸುವವರಿಗೆ ಸಮಯಕ್ಕೆ ಸರಿಯಾಗಿ ಕೆಲಸಗಾರರು ಸಿಗದೆ ನಾಟಿ ವಿಳಂಬವಾಗುವುದರಜೊತೆಗೆಕೈಯಿಂದ ನಾಟಿ ಮಾಡಿ ಆಳ ಮತ್ತುಅಂತರ ಸರಿಯಾಗದೆ ಇಳುವರಿ ಕಡಿಮೆಯಾಗುತ್ತದೆ. ಆದರೆಯಾಂತ್ರೀಕೃತ ವಿಧಾನದಲ್ಲಿಕಡಿಮೆ ಸಮಯ ಹಾಗೂ ವೆಚ್ಚದಲ್ಲಿ ನಾಟಿ ಮಾಡಬಹುದಾಗಿರುವುದರಿಂದಜನರನ್ನು ಈ ಯಂತ್ರಗಳು ಹೆಚ್ಚು ಲಾಭದಾಯಕವಾಗಿವೆ.

 

Related posts

Leave a Reply

Your email address will not be published. Required fields are marked *