Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಭಾರತೀಯ ನೃತ್ಯಕ್ಕೆ ‘ವಿದೇಶಿ’ ಹೆಜ್ಜೆ

ಹಲವರು ಪಾಶ್ಚಾತ್ಯ ನೃತ್ಯಕ್ಕೆ ಮಾರುಹೋಗುವುದು ಸಾಮಾನ್ಯ. ಆದರೆ, ಪಾಶ್ಚಾತ್ಯರೇ ಭಾರತೀಯ ನೃತ್ಯಕಲಿತರೆ? ಹಾಗೆ ಕಲಿತ ನೃತ್ಯವನ್ನುಭಾರತೀಯ ಪ್ರತಿಭೆಗಳಂತೆಯೇ ಪ್ರಸ್ತುತಪಡಿಸಿದರೆ?ಇದಕ್ಕೆ ಸಂಬಂಧಿಸಿದ ಕುತೂಹಲವನ್ನುತಣಿಸುವ ಹಾಗೆಯೇಈ ಸಲದ ಲಕ್ಷದೀಪೋತ್ಸವ ಕಂಗೊಳಿಸಿತು.ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಡಿ.ಎಂ ಪೌಢ ಶಾಲಾ ಆವರಣದಲ್ಲಿಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮಕ್ಕೆ ಸಿದ್ಧಪಡಿಸಿರುವ ವಸ್ತುಪ್ರದರ್ಶನ ಮಂಟಪದಲ್ಲಿಜರ್ಮನಿಯಕಲಾವಿದರು ಭರತನಾಟ್ಯ ಸೇರಿದಂತೆದೇಶದ ವಿವಿಧ ರಾಜ್ಯಗಳ ದೇಶೀಯ ಕಲೆಗಳನ್ನು ಪ್ರತಿನಿಧಿಸುವ ನೃತ್ಯಗಳನ್ನು ಪ್ರದರ್ಶಿಸಿ ಕಲಾ ರಸಿಕರನ್ನುರಂಜಿಸಿದರು.
ಉಡುಪಿಯದರ್ಪಣ‘ಸ್ಕೂಲ್‍ಆಫ್‍ಪರ್‍ಫಾರ್ಮಿಂಗ್’ನ 25 ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಲು ಆಗಮಿಸಿದ್ದರು. ಅವರಲ್ಲಿ ನಾಲ್ವರುಜರ್ಮನಿಯವರು.ಅವರ ನೃತ್ಯ ಪ್ರದರ್ಶನ ದೇಶೀ ಪ್ರತಿಭೆಗಳಿಗೆ ಸವಾಲೆಸೆಯುವಂತಿತ್ತು.
ನೃತ್ಯದ ಮೂಲಕ ಶ್ರೀಗಣೇಶನನ್ನು ವಂದಿಸಿದ ಬಗೆ ಅಲ್ಲಿದ್ದವರನ್ನೆಲ್ಲಾ ಅಕರ್ಷಿಸಿತು. ಭರತನಾಟ್ಯ, ಶ್ರೀ ಕೃಷ್ಣ ಬಾಲ ಲೀಲೆ, ಮೋಹಿನಿಯಾಟ್ಟಂ, ಚಿರ್ಮಿ ನೃತ್ಯ, ರಾಜಸ್ಥಾನದಕೌಲ್ ಬೇಲಿಯಾ, ನವಿಲು ನರ್ತನ, ಯೋಗ, ಮಣಿಪುರಿ, ಕತಕ್ ಹೀಗೆ ವಿವಿಧ ನೃತ್ಯಗಳನ್ನು ಪ್ರಸ್ತುತಪಡಿಸಿದರು.
ಉಡುಪಿಯದರ್ಪಣ‘ಸ್ಕೂಲ್‍ಆಫ್‍ಪರ್ಫಾರ್ಮಿಂಗ್’ಆರಂಭಗೊಂಡು 4 ವರ್ಷಗಳಾಗಿದ್ದು, ಈವರೆಗೆ ಹಲವಾರುದೇಶ ವಿದೇಶಿಯರಿಗೆ ಭಾರತೀಯ ನೃತ್ಯ ಶೈಲಿಯನ್ನುಕುಮಾರಿರಕ್ಷಾ ಹಾಗೂ ರಮ್ಯ ಕಲಿಸಿಕೊಡುತ್ತಿದ್ದಾರೆ. ದೇಶದ ವಿವಿಧ ಕಡೆಗಳಲ್ಲಿ ವೈವಿಧ್ಯಮಯವಾದ ನೃತ್ಯಕಾರ್ಯಕ್ರಮಗಳ ಪ್ರದರ್ಶನ ನೀಡುತ್ತಾಬಂದಿದ್ದಾರೆ.ಅಲ್ಲದೇ, ಟಿವಿ ವಾಹಿನಿಗಳಲ್ಲಿ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ನಾಟ್ಯ ಮಯೂರಿ ಹಾಗೂ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೃತ್ತಿಯಲ್ಲಿಕಂಪ್ಯೂಟರ್ ಸೈನ್ಸ್‍ಇಂಜಿನಿಯರ್‍ಆಗಿದ್ದು, ಯಕ್ಷಗಾನ, ನೃತ್ಯ , ನಾಟಕಗಳನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ.
ಭಾರತೀಯ ನೃತ್ಯ ಶೈಲಿಯನ್ನುಕಲಿಯುವಆಸಕ್ತಿಯಿಂದಜರ್ಮನಿ ನಾಲ್ವರು ವಿದೇಶಿಯರು ಆಗಸ್ಟ್ ತಿಂಗಳಲ್ಲಿಉಡುಪಿಯ‘ದರ್ಪಣ ಸ್ಕೂಲ್‍ಆಪ್‍ಪರ್ಫಾರ್ಮಿಂಗ್’ ಪ್ರವೇಶಾತಿ ಪಡೆದಿದ್ದರು.ಅತ್ಯಂತಕಡಿಮೆಅವಧಿಯಲ್ಲಿ ಭಾರತೀಯನೃತ್ಯಕಲಿತು ಮೊದಲ ಬಾರಿಗೆ ಲಕ್ಷದೀಪೋತ್ಸವದಲ್ಲಿ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು.

Related posts

Leave a Reply

Your email address will not be published. Required fields are marked *