Header Ads
Header Ads
Header Ads
Breaking News

ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ ಸುಖಕ್ಕೆ ಮೂಲ ಧರ್ಮ, ಧರ್ಮಾದಾರಿತ ಜೀವನ ನಡೆಸಬೇಕು ಮೆಲ್ಕಾರ್‌ನಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ

ಬಂಟ್ವಾಳ: ಸುಖಕ್ಕೆ ಮೂಲ ಧರ್ಮ. ಧರ್ಮಾದಾರಿತ ಜೀವನವನ್ನು ನಾವು ನಡೆಸಬೇಕು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಮೆಲ್ಕಾರ್‌ನ ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿಯಮಿತ ಇದರ ನೂತನ ಕಕ್ಯಪದವು ಶಾಖೆಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.


ಕೇವಲ ಅಕ್ಷರ ಕಲಿತ ಮಾತ್ರಕ್ಕೆ ವ್ಯಕ್ತಿ ವಿದ್ಯಾವಂತನಾಗುವುದಿಲ್ಲ. ಜಗತ್ತನ್ನು ಆಳಲು ಅಕ್ಷರವಂತನಾಗ ಬೇಕಿಲ್ಲ ಎಂದ ಅವರು ವ್ಯಕ್ತಿ ಹರಿಷಡ್ವರ್ಗಗಳನ್ನು ಗೆಲ್ಲಬೇಕು, ಅದಕ್ಕಾಗಿ ಮನಸ್ಸಿನೊಳಗಿನ ಆಸೆಯೆಂಬ ಪರದೆಯನ್ನು ಹೊಡೆದೋಡಿಸಬೇಕು ಎಂದರು. ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ರೋಹಿನಾಥ ಪಾದೆ, ಸೊಸೈಟಿ ನಿರ್ದೆಶಕ , ತಾ.ಪಂ. ಸದಸ್ಯ ಸಂಜೀವ ಪೂಜಾರಿ, ರೋಟರಿ ಕ್ಲಬ್ ಅಧ್ಯಕ್ಷ ಸಂಜೀವಪೂಜಾರಿ, ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಡಾ. ರೆಫಾಯಿನ್ ಸೇರಾ, ಅಬ್ದುಲ್ ರಹಿಮಾನ್, ಕಜೆಕಾರ್ ಗ್ರಾ. ಪಂ. ಅಧ್ಯಕ್ಷ ವಜ್ರಪೂಜಾರಿ, ಉಳಿ ಗ್ರಾ.ಪಂ. ಸದಸ್ಯ ಚಿದಾನಂದ ರೈ ಮತ್ತಿತರರು ಹಾಜರಿದ್ದರು.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply