Header Ads
Breaking News

ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನಕ್ಕೆ ಹರಿದು ಬಂದ ಹಸಿರು ಹೊರೆಕಾಣಿಕೆ

ಶ್ರೀ ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಜ.16 ರಂದು ಸಂಜೆ ನಡೆಯಿತು.


ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಮುಂಭಾಗದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಯು ಆರಂಭಗೊಂಡು ಬೆಳ್ಳಾರೆ ಪೇಟೆಯ ಮೂಲಕ ದೇವಾಲಯ ಪ್ರವೇಶಿಸಿತು.


ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆಯವರ ನೇತೃತ್ವದಲ್ಲಿ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಅಧ್ಯಕ್ಷರಾದ ಸುನೀಲ್ ರೈ ಪುಡ್ಕಾಜೆಯವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ದೇಗುಲದಲ್ಲಿ ಹಸಿರು ಹೊರೆಕಾಣಿಕೆಗಳಿಗೆ ಆರತಿ ಬೆಳಗಿ ದೇಗುಲದಲ್ಲಿ ಸ್ವೀಕರಿಸಲಾಯಿತು.

ಸಮಿತಿ ವತಿಯಿಂದ ಸ್ಯಾಕ್ಸೋಫೋನ್ , ಧ್ವಜವಾಹನಗಳು, ಗೊಂಬೆಗಳು, ಫಲವಸ್ತುಗಳು ಹಸಿರುವಾಣಿ ಹೊರೆಕಾಣಿಕೆಯೊಂದಿಗೆ ಮೆರವಣಿಗೆ ಸಾಗಿ ಬಂತು.

ಈ ಸಂದರ್ಭ ದೇಗುಲದ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪಿ. ವೆಂಕಟಕ್ರಷ್ಣ ರಾವ್, ಜಯಪ್ರಕಾಶ್ ರೈ ಬಿ, ಪಿ. ಜಗನ್ನಾಥ ರೈ,ದಾಮೋದರ ನಾಯ್ಕ, ನಾರಾಯಣ. ಕೆ, ಶ್ರೀಮತಿ ಭಾಗ್ಯಲಕ್ಷ್ಮೀ, ಶ್ರೀಮತಿ ಯಶೋದ ಎ.ಎಸ್. ಹಾಗೂ ಮಾಜಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ, ದೇವರಾಜ್ ಆಳ್ವ, ಪದ್ಮನಾಭ ನೆಟ್ಟಾರು, ಪ್ರದೀಪ್ ರೈ ಅಜ್ರಂಗಳ,ಚಿದಾನಂದ ರೈ ವೈಪಾಲ, ಮೋನಪ್ಪ ಪೂಜಾರಿ ಪೆರುವಾಜೆ, ಬಾಲಕೃಷ್ಣ ಆಚಾರ್ಯ, ರಾಮಣ್ಣ ರೈ ವೈಪಾಲ, ಜಯಚಂದ್ರ ಪೆರುವಾಜೆ, ಸಚಿನ್ ಭಟ್, ವಾಸುದೇವ ಪೆರುವಾಜೆ, ಜಗದೀಶ್ ರೈ ಪೆರುವಾಜೆ, ರಮೇಶ್ ಮಠತ್ತಡ್ಕ, ರಾಜೇಶ್ ಸಾರಕೆರೆ, ಧರ್ಮಪಾಲ್ ಪೆರುವಾಜೆ, ಕುಶಾಲಪ್ಪ ಗೌಡ, ಯತೀಶ್ ನಾಗನಮಜಲು, ಪ್ರಸಾದ್ ರೈ, ರಾಜೇಶ್, ಕೃಷ್ಣ, ಸನತ್, ಹರ್ಷಿತ್, ಚೇತನ್, ರಕ್ಷಿತ್ ಸದಾಶಿವ ಪೆರುವಾಜೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *