
ಸಮಸ್ತ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಭಕ್ತರು ಇದರ 15ನೇ ವಾರ್ಷಿಕದ ಪ್ರಯುಕ್ತ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ರವರ 13ನೇ ಕಲಾ ಕೃತಿಯ ಶ್ರೀ ದೇವಿಪಂಚಾಮೃತ ಯಕ್ಷಗಾನ ಬಯಲಾಟ ಬೋಂದೆಲ್ ಕೃಷ್ಣನಗರದ ಮೈದಾನದಲ್ಲಿ ನಡೆಯಿತು.
ಹಿರಿಯ ಯಕ್ಷಗಾನ ಕಲಾವಿದ ಕೊಲ್ತಿಗೆ ನಾರಾಯಣ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಾರತ ದೇಶ ಭಾರತವಾಗಿ ಉಳಿಯಬೇಕಾದರೆ ಯಕ್ಷಗಾನದಂತಹ ಕಲೆಗಳನ್ನು ಉಳಿಸಿ ಬೆಳಸಿದ್ದರೆ ಮಾತ್ರ ಉತ್ತಮ ಸಂಸ್ಕ್ರತಿ ಇರುವ ದೇಶವಾಗಿ ಉಳಿಯಲು ಸಾಧ್ಯ ಎಂದ್ರು.
ಈ ಸಂದರ್ಭ ರಾಜಾರಾಂ ಬಂದಾರು,ಸಮಾಜ ಸೇವಕಿ ಡಾ. ಸಂಸಾದ್ ಕುಂಜತ್ತಬೈಲ್, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ನಿರೂಪಕಿ ಡಾ.ಪ್ರೀಯಾ ಹರೀಶ್, ಸಮಾಜ ಸೇವಕ ರಹ್ಮಾನ್ ರವರನ್ನು ಸನ್ಮಾನಿಸಲಾಯಿತು.
ಮಾಜಿ ಮೇಯರ್ ಹರಿನಾಥ್ ಬೋಂದೆಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬೋಂದೆಲ್ ನ ಕೃಷ್ಣನಗರ ನಾಗರಿಕರು ಕಲೆ ಮತ್ತು ಸಾಹಿತ್ಯದ ಅಭಿಮಾನಿಗಳಾಗಿದ್ದಾರೆ. ಈ ಪ್ರದೇಶದಲ್ಲಿ ನಿರಂತರವಾಗಿ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಇದೆ ರೀತಿ ಮುಂದುವರಿಯಲಿ ಎಂದರು.
ಈ ಸಂದರ್ಭ ಇತ್ತೀಚೆಗೆ ಮಳೆಹಾನಿಯಿಂದ ತೊಂದರೆಗೊಳಗಾದ ಕುಟುಂಬಕ್ಕೆ ರೇಶನ್ ಕಿಟ್ ವಿತರಿಸಲಾಯಿತು.ಶ್ರೀ ಕ್ಷೇತ್ರ ಸುಂಕದಕಟ್ಟೆಯ ಧರ್ಮದರ್ಶಿ ನಾರಾಯಣ ಎನ್.ಪೂಜಾರಿ, ಎಂ.ಕೆ ರಮೇಶ್ ಆಚಾರ್ಯ, ಬಂದರ್ ಠಾಣಾ ಪೊಲಿಸ್ ಸಬ್ ಇನ್ಸ್ ಪೆಕ್ಟರ್ ವಿಜಯರಾಜ್, ಎನ್.ನಾರಾಯಣ ರೈ, ಉದ್ಯಮಿ ದಿವಾಕರ್ .ಎನ್, ಸುಂಕದಕಟ್ಟೆ ಮೇಳದ ಪ್ರಬಂಧಕ ರಮೇಶ್ ಕುಲಶೇಕರ, ಅನಿಲ್ ಬೋಂದೆಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.