Header Ads
Header Ads
Header Ads
Header Ads
Header Ads
Header Ads
Breaking News

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಅದ್ಧೂರಿಯಾಗಿ ನಡೆಯಿತು ಆಟಿದ ಗಮ್ಮತ್ತು ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಆಟಿದ ಗಮ್ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸೋನಿಯಾ ವರ್ಮರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಅಯೋಜನೆಯ ಕುರಿತು ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ತುಳುನಾಡಿನ ಸಂಸ್ಕೃತಿಯ ಅರಿವು ಮೂಡಿಸಬೇಕು ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವದುದ್ದು ಎಂದು ತಿಳಿಸಿದರು.
ಆಟಿ ತಿಂಗಳ ವಿಶೇಷತೆ ಆಟಿ ಅಮವಾಸ್ಯೆಯ ಮಹತ್ವ ಮತ್ತು ತುಳುನಾಡಿನ ಸಂಸ್ಕೃತಿಯ ಅರಿವು ಮೂಡಿಸುವ ಸಲುವಾಗಿ ಶಾಲೆಯಲ್ಲಿ ತುಳುನಾಡಿನ ಮನೆಗಳಲ್ಲಿ ಬಳಸುವ ಪುರಾತನ ವಸ್ತುಗಳ ಪ್ರದರ್ಶನ, ಆಟಿ ತಿಂಗಳಲ್ಲಿ ತಿನ್ನುವ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು. ಅಂತೆಯೇ ವಿದ್ಯಾರ್ಥಿಗಳೆಲ್ಲ ಗದ್ದೆಗೆ ಇಳಿದು ತುಳುನಾಡಿನ ವಿವಿಧ ಕೇಸರುಗದ್ದೆಯ ಆಟಗಳನ್ನು ಆಡಿ ಆನಂದ ಪಟ್ಟರು. ಗದ್ದೆಯ ತಯಾರಿಕೆ, ಭತ್ತ ನಾಟಿ ಮಾಡುವ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ವಿಧ್ಯಾರ್ಥಿಗಳಿಂದ ನಾಟಿ ಮಾಡಿಸಲಾಯಿತು.

Related posts

Leave a Reply

Your email address will not be published. Required fields are marked *