Header Ads
Breaking News

ಶ್ರೀ ನಿತ್ಯಾನಂದ ಪರಮಗುರುಗಳ ಮೂರ್ತಿ ಪ್ರತಿಷ್ಠಾಪನೆ; ಮೆರವಣಿಗೆಯ ಮೂಲಕ ಸಾಗಿಸಲಾದ ನಿತ್ಯಾನಂದ ಸ್ವಾಮಿಗಳ ಮೂರ್ತಿ

ಬಂಟರ ಸಂಘ (ರಿ) ಪಡುಬಿದ್ರಿ, ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಪಡುಬಿದ್ರಿ ವತಿಯಿಂದ ಸದ್ಗುರು ಶ್ರೀ ನಿತ್ಯಾನಂದ ಪರಮಗುರುಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ಪಡುಬಿದ್ರಿ ಬಂಟರ ಭವನಕ್ಕೆ ನಿತ್ಯಾನಂದ ಸ್ವಾಮಿಗಳ ಮೂರ್ತಿಯನ್ನು ನೂರಾರು ಭಕ್ತರು ಸಮ್ಮುಖದಲ್ಲಿ ಭವ್ಯ ಮೆರವಣಿಗೆಯಲ್ಲಿ ಸಾಗಿಸಲಾಯಿತು.


ಈ ಭವ್ಯ ಮೆರವಣಿಗೆಗೆ ಚೆಂಡೆ ಕುಣಿತ, ಭಜನಾ ಕುಣಿತ, ಗೊಂಬೆ ಕುಣಿತ, ವಾದ್ಯ, ಕೊಂಬು ವಾದನ ಸಹಿತ ಕಲಶ ಹಿಡಿದ ಮಹಿಳಾ ಮಣಿಗಳು ಮೆರವಣಿಗೆಗೆ ಮೆರುಗು ನೀಡಿದ್ದರು. ಪಡುಬಿದ್ರಿ ಕಾರ್ಕಳ ರಸ್ತೆಯಿಂದ ಬಂಟರ ಭವನದ ವರಗೆ ಕಾಲ್ನಡಿಗೆ ಮೂಲಕ ಈ ಮೆರವಣಿಗೆ ಸಾಗಿ ಬಂತು.

ಈ ಸಂದರ್ಭ ಪೇಟೆ ಭಾಗದಲ್ಲಿ ಒಂದು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ ಪಡುಬಿದ್ರಿ ಪೊಲೀಸರು ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು. ಪ್ರಮುಖವಾಗಿ ಶೋಭಾಯಾತ್ರೆಯಲ್ಲಿ ಕೇಮಾರು ಈಶ ವಿಠದಾಸ ಶ್ರೀಗಳು, ಸಹಿತ ಬಂಟರ ಸಂಘದ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಶಶಿಧರ ಶೆಟ್ಟಿ ಎರ್ಮಾಳ್, ಸಾಂತೂರು ಭಾಸ್ಕರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕಾಪು ದಿವಾಕರ್ ಶೆಟ್ಟಿ, ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *