Header Ads
Header Ads
Header Ads
Header Ads
Header Ads
Header Ads
Breaking News

ಶ್ರೀ ಪಾಂಡುರಂಗ ಹವ್ಯಾಸಿ ಕಲಾ ಸಂಘದ ವತಿಯಿಂದ ಕೆಮುಂಡೇಲು ಯುವಕರಿಂದ ಕೆಸರ್‍ಡ್ ಕುಸಲ್

ಇನ್ನೂರು ಮಂದಿ ಸದಸ್ಯರನ್ನು ಒಳಗೊಂಡ ಶ್ರೀ ಪಾಂಡುರಂಗ ಹವ್ಯಾಸಿ ಕಲಾ ಸಂಘದ ಸದಸ್ಯರೇ ಈ ಗ್ರಾಮದ ಬಲು ದೊಡ್ಡ ಆಸ್ತಿ, ಇದೀಗ ಆ ಸಂಘ ಮಿತ್ರರೆಲ್ಲಾ ವಿವಿಧ ಸಂಘಟನೆಗಳನ್ನು ಸೇರಿಸಿಕೊಂಡು ಕೃಷಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕೆಸರ್‍ಡ್ ಕುಸಲ್ ಎಂಬ ಕೆಸರುಗದ್ದೆ ಸ್ಪರ್ಧೆಯನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ.

ಕಳೆದ ಆರು ವರ್ಷಗಳಿಂದ ಶ್ರೀ ಪಾಂಡುರಂಗ ಭಜನಾ ಮಂಡಳಿ, ಯುವಜನ ಮತ್ತು ಕ್ರೀಢಾ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಪೂಜಾ ಮಹಿಳಾ ಮಂಡಲ ಇವರ ಜಂಟಿ ಆಶ್ರಯದಲ್ಲಿ ಮಾತೃ ಸಂಸ್ಥೆಯಾದ ಶ್ರೀಪಾಂಡುರಂಗ ಹವ್ಯಾಸಿ ಕಲಾ ಸಂಘದ ಸದಸ್ಯರು ಕೆಸರು ಗದ್ದೆಯ ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಯುವ ಪೀಳಿಗೆಗೆ ಕೆಸರಿನ ಕಂಪನ್ನು ಪರಿಚಯಿಸುವ ಹಾಗೂ ಕಮರಿ ಹೋಗುತ್ತಿರುವ ಕೃಷಿಯನ್ನು ಮತ್ತೆ ತುಳುನಾಡಿನುದ್ಧಕ್ಕೂ ಬೆಳೆಸಿ ಪೋಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಈ ಶ್ಲಾಘನೀಯ ಕಾರ್ಯದಲ್ಲಿ ಯಶಸ್ಸು ಕಂಡ ಈ ಸಂಸ್ಥೆ ಇದೀಗ ಗ್ರಾಮದ ಬಹುತೇಕ ಹಡಿಲು ಬಿದ್ದ ಕೃಷಿ ಭೂಮಿಯನ್ನು ಭೂ ಮಾಲಕರ ಒಪ್ಪಿಗೆ ಪಡೆದು ಕೃಷಿ ಚಟುವಟಿಯನ್ನು ನಡೆಸುವ ಮೂಲಕ ಯಶಸ್ಸು ಸಾಧಿಸಿದ್ದು, ಅದರಿಂದ ಬಂದ ಲಾಭಂಶವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಮೂಲಕ ಗ್ರಾಮದ ಜನರ ಪ್ರೀತಿಗೆ ಪಾತ್ರವಾಗಿದೆ ಈ ಸಂಘ. ಕೆಮುಂಡೇಲು ಕುದುರೆಬೈಲಿನ ಅಮಾಸೆಮಾರ್ ಗದ್ದೆಯಲ್ಲಿ ನಡೆದ ಈ ಗ್ರಾಮೀಣ ಕ್ರೀಡಾಕೂಟದಲ್ಲಿ ನಾಲ್ಕು ನೂರಕ್ಕೂ ಅಧಿಕ ಮಂದಿ ಗಂಡಸರು-ಮಹಿಳೆಯರು-ಮಕ್ಕಳು ವೃದ್ಧರೆನ್ನೆದ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದೆ ಎನ್ನುತ್ತಾರೆ ಸಂಸ್ಥೆಯ ಸದಸ್ಯ ಹರೀಶ್ ಕೋಟ್ಯಾನ್.

Related posts

Leave a Reply

Your email address will not be published. Required fields are marked *