Header Ads
Header Ads
Breaking News

ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಗಳ ಪಟ್ಟಾಭಿಷೇಕ ಮಹೋತ್ಸವ. ಸಾವಿರಾರು ಸಾಧು ಸಂತರು ಪುಣ್ಯ ಕಾರ್ಯದಲ್ಲಿ ಭಾಗಿ. ಲೋಕಕಲ್ಯಾಣಾರ್ಥವಾಗಿ ರಾಷ್ಟ್ರೀಯ ಧರ್ಮ ಸಂಸತ್.

ಬಂಟ್ವಾಳ: ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸದ್ಗುರು ಪಟ್ಟಾಭಿಷೇಕ ದಶಾಮಾನೋತ್ಸವ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ನಡೆಯಿತು. ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಗಳ ಪಾದ ಪೂಜೆ ಮಾಡಿ, ಹಾರ ಹಾಕಿ ಕಿರೀಟ ತೊಡಿಸಿ ಶ್ರೀಗಳ ಭಕ್ತರು ಪಟ್ಟಾಭಿಷೇಕ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಉತ್ತರ ಭಾರತದ ಸಾವಿರಾರು ಸಾಧು ಸಂತರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದರು.

ಪಟ್ಟಾಭಿಷೇಕ ಮಹೋತ್ಸವ ಶ್ರೀರಾಮನಿಗೆ, ಸನಾತನ ಹಿಂದೂ ಧರ್ಮಕ್ಕೆ ಎನ್ನುವ ಕಲ್ಪನೆಯಂತೆ ಸಾಂಕೇತಿಕವಾಗಿ ಪಟ್ಟಾಬೀಷೇಕ ದಶಾಮಾನೋತ್ಸವ ಆಚರಿಸಲಾಯಿತು. ಇದೇ ಸಂದರ್ಭ ಲೋಕ ಕಲ್ಯಾಣಾರ್ಥವಾಗಿ ಸಂನ್ಯಾಸಿಗಳ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಧರ್ಮ ಸಂಸತ್ ನಡೆಸಲಾಯಿತು. ಧರ್ಮಸ್ಥಳದ ಧರ್ಮಧಿಕಾರಿಯವರಾದ ಡಾ. ಡಿ. ವಿರೇಂದ್ರ ಹೆಗ್ಗಡೆ ಧರ್ಮ ಸಂಸತ್‌ನ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಪರಂಪರೆಯ ಸಾಧುಗಳು ವೇದಿಕೆಯಲ್ಲಿ ಹಾಜರಿದ್ದರು. ಕೆಂದ್ರ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಸಂಸದ ನಳಿನ್ ಕುಮಾರ್ ಕಟೀಲು ಉಪಸ್ಥಿತರಿದ್ದರು. ಸಹಸ್ರಾರು ಮಂದಿ ಭಕ್ತರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

Related posts

Leave a Reply