Header Ads
Breaking News

ಶ್ರೀ ಭಾರತೀ ಪದವಿ ಕಾಲೇಜಿನ ಸಹಯೋಗದಲ್ಲಿ ನಡೆದ ರಂಗ ಮಂದಿರದಲ್ಲಿ ಉದಿಪು-2020 ಕಾರ್ಯಕ್ರಮ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ರಂಗ ಮಂದಿರದಲ್ಲಿ ಉದಿಪು 2020 ಕಾರ್ಯಕ್ರಮ ನಡೆಯಿತು.

ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ತುಳು ಸಾಹಿತ್ಯ ಆಕಾಡೆಮಿ ರೂಪಿಸಿದ ವಿವಿಧ ಯೋಜನೆಗಳಿಗೆ ಸರಕಾರ ಬೆಂಬಲ ನೀಡಲಿದೆ. ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿಸುವ ಬಗ್ಗೆ ಸರಕಾರ ಅನುಮೋದಿಸಲಿದೆ. ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಮಯವೂ ಹತ್ತಿರ ಬಂದಿದೆ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‍ಸಾರ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುಳುನಾಡ ಉತ್ಸವವನ್ನು ನಡೆಸಲು ಒಪ್ಪಿದ್ದಾರೆ. ಇನ್ನು ಮಉಂದೆ ಕರಾವಳಿ ಉತ್ಸವದ ಬದಲಾಗಿ ತುಳುನಾಡ ಉತ್ಸವವೇ ನಡೆಯಲಿದೆ ಎಂದರು.

ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ಶಕೀಲಾ ಕಾವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಉದಿಪು ಕಾರ್ಯಕ್ರಮ ಭಾಷೆಯ ಉಳಿವಿಗಾಗಿ ಅತ್ಯಂತ ಮುಖ್ಯವಾಗಿದೆ. ಶ್ರೀ ಭಾರತೀ ಸಮೂಹ ಸಂಸ್ಥೆಯು ಈ ಬಗ್ಗ್ಗೆ ವಿಶೇಷ ಕಾಳಜಿ ವಹಿಸಿರುವುದು ವಿಶೇಷವಾವಾಗಿದೆ. ಇದು ಅನುಕರಣೀಯ. ತುಳು ಅಕಾಡೆಮಿಯ ಸಹಕಾರ ನೀಡಿದ್ದು ಅರ್ಥಪೂರ್ಣ. ಮುಂದಿನ ವರ್ಷ ಇದನ್ನು ನಡೆಸಬೇಕು. ನಾವೆಲ್ಲರೂ ಇದಕ್ಕೆ ಹೆಚ್ಚಿನ ಸಹಕಾರ ನೀಡಲು ಸಿದ್ಧ ಎಂದರು.

ಬಳಿಕ ಜಿಲ್ಲೆಯ 30 ಪದವಿ ಕಾಲೇಜುಗಳ 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತುಳುನಾಡ ಐಸಿರೊ, ಪದರಂಗೀತ, ಸಬಿಸವಾಲ್, ಚಿತ್ರಮಂಟಮೆ ಮತ್ತು ಬಿರ್ಸಾದಿಗೆದ ಕಜ್ಜೊ ಎಂಬ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೂರ್ಣಕುಂಭ, ಚೆಂಡೆ ಮತ್ತು ನಾಸಿಕ್ ವಾದನಗಳೊಂದಿಗೆ ಆಕರ್ಷಕ ಮೆರವಣಿಗೆ, ಸೆಲ್ಫಿ ಕಾರ್ನರ್, ಸಿರಿಗಳಿಂದ ಅಲಂಕೃತ ದ್ವಾರಗಳು, ಶುಚಿರುಚಿಯಾದ ತುಳು ಸಂಸ್ಕøತಿ ಆಹಾರಗಳನ್ನೊಳಗೊಂಡ ಊಟ, ತಿಂಡಿ, ಉಪಾಹಾರ ಅತಿಥಿ ಅಭ್ಯಾಗತರ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳ ಹೃಣ್ಮನವನ್ನು ಗೆದ್ದಿತು.

ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಹುಬ್ಬಳ್ಳಿ ಆನನ್ಯ ಫೀಡ್ಸ್ ಮಾಲಕ ದಿವಾಣ ಗಓವಿಂದ ಭಟ್, ತುಳು ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್, ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್, ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್‍ದಾಸ್, ಕಲಾಭಾರತಿ ಸಂಯೋಜಕ ಪ್ರವೀಣ್ ಪಿ., ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ಮತ್ತು ಉಪನ್ಯಾಸಕ ಅಶೋಕ್ ಎಸ್., ಕಲಾಭಾರತಿ ಕಾರ್ಯದರ್ಶಿ ಮಿಥುನ್‍ರಾಜ್. ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *