Header Ads
Header Ads
Breaking News

ಶ್ರೀ ಮಹಾಲಕ್ಷ್ಮಿ ಪ್ರತಿಮೆ ಉದ್ಘಾಟನೆ. ಬೋಳೂರಿನ ಮೊಗವೀರ ಗ್ರಾಮ ಚಾವಡಿಯಲ್ಲಿ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಪುರಸ್ಕಾರ.

ಇಂತಹ ಆಸಕ್ತ ವಿದ್ಯಾರ್ಥಿಗಳನ್ನು ನಾವು ಪ್ರೋತ್ಸಾಹಿಸಬೇಕು ಎಂದು ಹೇಳಿದರು.ಬೋಳೂರು ಮೊಗವೀರ ಮಹಾಸಭಾದ ವತಿಯಿಂದ ಶ್ರೀ ಮಹಾಲಕ್ಷ್ಮಿ ಪ್ರತಿಮೆ ಉದ್ಘಾಟನೆಯು ಬೋಳೂರಿನ ಮೊಗವೀರ ಗ್ರಾಮ ಚಾವಡಿಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ಪ್ರತಿಮೆಯನ್ನು ಕಾಪು ವಿಧಾನ ಸಭಾ ಸದಸ್ಯರಾದ ಲಾಲಜಿ ಮೆಂಡನ್‌ರವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬೋಳೂರು ಮೋಗವೀರ ಮಹಾಸಭಾದಿಂದ ಸಾಮಾಜಮುಖಿ ಕೆಲಸಗಳು ನಡೆಯುತ್ತಿದೆ ನಮ್ಮ ಸಮಾಜದಲ್ಲಿ ಇಂದಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಮುಂದಾಗಿದ್ದಾಗಿದ್ದಾರೆ.ಆನಂತರ ಮಾತನಾಡಿದ ಗಂಗಾಧರ ಹೊಸಬೆಟ್ಟು ಅವರು ಮಾತನಾಡಿ, ಪ್ರತೀ ವರ್ಷವೂ ಬೋಳೂರು ಮೊಗವೀರ ಮಹಾಸಭಾದಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಇನ್ನಿತರ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಲಾಲಜಿ ಮೆಂಡನ್‌ರವರವರನ್ನು ಬೋಳೂರು ಮೋಗವೀರ ಮಹಾಸಭಾದಿಂದ ಸನ್ಮಾನಿಸಲಾಯಿತು.ಇದೇ ವೇಳೆ ಸಮಾಜದ ವಿದ್ಯಾರ್ಥಿಗಳಿಗೆ2018-19ನೇ ಸಾಲಿನ ಪ್ರತಿಭಾ ಪುರಸ್ಕಾರ, ಕ್ರೀಡಾ ಪುರಸ್ಕಾರವನ್ನು ಮಾಡಲಾಯಿತು ಹಾಗೂ ವಿದ್ಯಾರ್ಥೀಗಳಿಗೆ ಉಚಿತ ಫೆರಿಪಾಸು ವಿತರಿಸಲಾಯಿತು. ಇನ್ನು ಎನ್‌ಸಿಸಿ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ನೀಡಲಾಯಿತುಕಾರ್ಯಕ್ರಮದಲ್ಲಿ ಮತ್ಸ್ಯೋದ್ಯಮಿ ಭರತ್ ಭೂಷಣ್ ಮೆಂಡನ್, ಬರ್ಕೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಕೆ ಕೆ ರಾಮಕೃಷ್ಣ, ಕಾರ್ಪೋರೇಟರ್ ಲತಾ ಸಾಲ್ಯಾನ್, ಮೊಗವೀರ ಮಹಾಸಭಾ ಅಧ್ಯಕ್ಷರಾದ ರಾಜಶೇಖರ್ ಕರ್ಕೇರಾ, ಬೊಳೂರು ಮಹಿಳಾ ಮಂಡಲದ ಅಧ್ಯಕ್ಷರಾದ ಸವಿತಾ ರಘು, ಬೋಳೂರಿನ ಮೊಗವೀರ ಮಹಾಸಭಾದ ಗುರುಕಾರರು, ಮೊಗವೀರ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ, ಮಹಿಳಾ ಮಂಡಳಿ, ಫೆರಿ ಸರ್ವೀಸ್‌ನ ಅಧ್ಯಕ್ಷರು, ಕಮಿಟಿ ಸದಸ್ಯರು, ಸರ್ವಸದಸ್ಯರು ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply