Header Ads
Breaking News

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಶಿಲಾ ಶೋಭಾಯಾತ್ರೆ

ಕಡಬ ತಾಲೂಕಿನ ಬಂಟ್ರ ಗ್ರಾಮದಲ್ಲಿರುವ ಮರ್ಧಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಶಿಲಾ ಶೋಭಾಯಾತ್ರೆಯು ನಡೆಯಿತು.

ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಪದ್ಮವಿಭೂಷಣ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ಶುಭಾರ್ಶಿವಾದ ಹಾಗೂ ವಾಸ್ತುಶಿಲ್ಪಿ ಶ್ರೀ ಪ್ರಸಾದ್ ಮುನಿಯಂಗಳರವರ ಮಾರ್ಗದರ್ಶನದೊಂದಿಗೆ ದೇಗುಲವು ಜೀರ್ಣೋದ್ಧಾರಗೊಳ್ಳಲಿದ್ದು, ಇದರ ಪ್ರಾರಂಭೋತ್ಸವದ ಪ್ರಯುಕ್ತ ಕಡಬ ಶ್ರೀ ದುಗಾರ್ಂಬಿಕಾ ಅಮ್ಮನವರ ಸನ್ನಿಧಿಯಿಂದ ವೈಧಿಕಾರಾಧನೆಯೊಂದಿಗೆ ಶ್ರೀ ಕ್ಷೇತ್ರ ಮರ್ಧಾಳಕ್ಕೆ ಶೋಭಾ ಯಾತ್ರೆ ಸಾಗಿತ್ತು.ಕಾಲ್ನಡಿಗೆಯಲ್ಲಿ ಭಜನೆ, ಚೆಂಡೆ, ವಾದ್ಯ, ಶಂಖ, ಜಾಗಟೆ ಹಾಗೂ ವಿವಿಧ ವೇಷಭೂಷಣಗಳೊಂದಿಗೆ ವಿಜೃಂಭಣೆಯಿಂದ ಶೋಭಾಯಾತ್ರೆ ನಡೆಯಿತು.

Related posts

Leave a Reply

Your email address will not be published. Required fields are marked *