Header Ads
Breaking News

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

 

ಬದಲಾವಣೆಯ ಕಾಲ ಘಟ್ಟದಲ್ಲಿ ಕನ್ನಡ ಭಾಷೆಯ ಮೇಲಿನ ಪ್ರೀತಿ ಉಳಿದುಕೊಳ್ಳುವ ಸಲುವಾಗಿ ಯೋಚನೆ ಮತ್ತು ಯೋಜನೆಗಳನ್ನು ರೂಪಿಸಬೇಕು. ಸಾಹಿತ್ಯ ಸಮ್ಮೇಳನಗಳು ಆ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸಿವೆ. ಇದರಿಂದ ಕನ್ನಡದ ಬಗೆಗಿನ ಸಂಕುಚಿತ ದೃಷ್ಟಿಕೋನ ಬದಲಾಗಿದೆ ಸಮ್ಮೇಳನ ಅಧ್ಯಕ್ಷ ಟಿ ನಾರಾಯಣ ಭಟ್ ಹೇಳಿದರು. ಅವರು ರಾಮಕುಂಜದಲ್ಲಿ ನಡೆದ ಕಡಬ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷಿಯ ಭಾಷಣ ಮಾಡಿದರು. ಕನ್ನಡ ಎನ್ನುವುದು ಭಾಷೆ. ಕನ್ನಡವನ್ನು ಪ್ರೀತಿಸುವ , ಅಕ್ಷರವನ್ನು ಗೌರವಿಸುವ ಮನಸ್ಸುಗಳು ಅಧಿಕವಾಗಬೇಕು. ಭಾಷೆ ಬದುಕಾಗಬೇಕು. ನಿತ್ಯ ಉಸಿರಾಗಬೇಕು ಎಂದು ಹೇಳಿದರು.

ಸಮ್ಮೇಳನದ ಉದ್ಘಾಟನೆ ನಡೆಸಿದ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ಸಾಹಿತಿಗಳು ಮತ್ತು ಸಾಹಿತ್ಯ ಸಮಾಜದ ಎರಡು ಕಣ್ಣುಗಳು. ಸಾಹಿತಿಯು ಸಮಾಜವನ್ನು ಕಟ್ಟುವ ಆಸಕ್ತಿಯನ್ನು ಹೊಂದಿದ್ದಾನೆ. ಅನ್ಯ ಭಾಷೆ, ಸಂಸ್ಕೃತಿಗಳು ನಮ್ಮ ಭಾಷೆಯನ್ನು ತುಳಿಯುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಕನ್ನಡ ನೆಲದಲ್ಲಿ ಕನ್ನಡವನ್ನು ಉಳಿಸಿ ಬೆಳಸಬೇಕಾದ ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಾಲ್ಯಶಿಕ್ಷಣನ್ನು ಮಾತೃಭಾಷೆಯಲ್ಲಿ ಕೊಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು. ಆರ್ಶೀವಚನ ನೀಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ , ಸಾಹಿತ್ಯ , ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಪೂರಕವಾಗಬೇಕು. ನಮ್ಮ ಭಾಷೆ ಉಳಿವಿಗೆ ಪಣ ತೋಡಬೇಕು ಎಂದರು.

ಸುಳ್ಯ ಶಾಸಕ ಎಸ್.ಅಂಗಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಭಾಷೆ ಯಾವೂದಾದರೂ ಭಾವನೆಗಳು ಒಂದೇ ಆಗಿರಬೇಕು ನಮ್ಮ ಹಿರಿಯರು ಜಾತಿ , ಭಾಷೆ ಭೇದಮರೆತು ಆಂಗ್ಲರ ವಿರುದ್ದ ಹೋರಾಡಿದ ಪರಿಣಾಮವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ತಾ.ಪಂ ಸದಸ್ಯೆಯರಾದ , ಜಯಂತಿ ಆರ್ ಗೌಡ, ತೇಜಸ್ವಿನಿ ಕಟ್ಟಪುಣಿ,ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ಕಡಬ ತಹಶಿಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೊತ್ತಮ ಗೌಡ , ಉದ್ಯಮಿ ಎಸ್ ಕೆ ಆನಂದ, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *