
ಅಯೋಧ್ಯಾ ಶ್ರೀ ರಾಮಜನ್ಮಭೂಮಿ ತೀರ್ಥ ಟ್ರಸ್ಟ್ ನ ನಿಧಿ ಸಂಗ್ರಹಾ ಅಭಿಯಾನ ಅಂಗವಾಗಿ ಪುತ್ತೂರಿನಲ್ಲಿ ಮಾತೃ ಸಮಾವೇಶ ಆಯೋಜಿಸಲಾಗಿತ್ತು. ರಾಮಜನ್ಮಭೂಮಿ ತೀರ್ಥ ಟ್ರಸ್ಟ್ ನ ವಿಶ್ವಸ್ಥ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ .ನಿಧಿ ಸಂಗ್ರಹದ ಬಗ್ಗೆ ಮಹಿಳೆಯರಿಗೆ ಮಾರ್ಗದರ್ಶನ ಮಾಡಿದರು
ಜನವರಿ 15 ರಿಂದ ನಿಧಿ ಸಂಗ್ರಹ ಅಭಿಯಾನ ನಡೆಯಲಿದ್ದು, 20 ದಿನಗಳ ಕಾಲ ಈ ಅಭಿಯಾನ ರಾಜ್ಯದಾದ್ಯಂತ ನಡೆಯಲಿದೆ. ರಾಜ್ಯದ ಪ್ರತೀ ಹಿಂದೂ ಮನೆಗಳನ್ನೂ ಈ ಅಭಿಯಾನದಡಿ ಸಂಪರ್ಕಿಸುವ ಕೆಲಸವನ್ನು ವಿಶ್ವಹಿಂದೂ ಪರಿಷತ್ ನಡೆಸಲಿದೆ ಎಂದು ಸಮಾವೇಶದಲ್ಲಿ ಮಾಹಿತಿ ನೀಡಿದರು.