
ಮುಂಬಯಿ ಬಂಟರ ಸಂಘದ ಆವರಣದಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವರಿಗೆ ಭಕ್ತರಿಂದ ಸೇವಾರೂಪದಲ್ಲಿ ಸುವರ್ಣ ಪುಷ್ಪ ಹಾರದ ಸಮರ್ಪಣಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಬ್ರಹ್ಮಶ್ರೀ ಕೆಯ್ಯೂರು ನಂದ ತಂತ್ರಿ ಅವರ ಮಾರ್ಗದರ್ಶನ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ಅವರ ಪೌರೋಹಿತ್ಯದಲ್ಲಿ ಸುವರ್ಣ ಪುಷ್ಪ ಹಾರದ ಸಮರ್ಪಣಾ ಕಾರ್ಯಕ್ರಮ ನಡೆಯಿತು.ಮುಂಬಯಿ ಬಂಟರ ಸಂಘದ ಆವರಣದಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವರಿಗೆ ಭಕ್ತರಿಂದ ಸೇವಾರೂಪದಲ್ಲಿ ಸುವರ್ಣ ಪುಷ್ಪ ಹಾರದ ಸಮರ್ಪಣೆಯು 17ರಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್ ಪಯ್ಯಡೆ ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ, ಜ್ಞಾನ ಮಂದಿರ ಸಮಿತಿಯ ಕಾಯಾಧ್ಯಕ್ಷ ರವೀಂದ್ರನಾಥ ಮಹಾಬಲ ಭಂಡಾರಿ ಅವರ ಯಜಮಾನಿಕೆಯಲ್ಲಿ ಬ್ರಹ್ಮಶ್ರೀ ಕೆಯ್ಯೂರು ನಂದ ತಂತ್ರಿ ಅವರ ಮಾರ್ಗದರ್ಶನ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ಅವರ ಪೌರೋಹಿತ್ಯದಲ್ಲಿ ನಡೆಯಿತು.
ಬೆಳಿಗ್ಗೆ ಗಣಹೋಮ, ಕಲಶಾಭಿಷೇಕ, ನಾಗತಂಬಿಲ ಮುಂತಾದ ಧಾರ್ಮಿಕ ಕಾರ್ಯಗಳು ಮಧ್ಯಾಹ್ನದ ನಂತರ ಭಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಸಂಜೆ ಶ್ರೀ ವಿಷ್ಣುಮೂರ್ತಿ ದೇವರಿಗೆ ಬಂಗಾರದ ಪುಷ್ಪ ಹಾರವನ್ನು ಸಮರ್ಪಿಸಲಾಯಿತು. ಆ ಬಳಿಕ ರಂಗಪೂಜೆ, ಅನ್ನಸಂತರ್ಪಣೆ ನೆರವೇರಿತು.
ಪೂಜೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜೊತೆ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ ಶೆಟ್ಟಿ ಐಕಳ, ಜ್ಞಾನ ಮಂದಿರ ಸಮಿತಿಯ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿನ್ನದ ಪುಷ್ಪ ಹಾರಕ್ಕೆ ಸಹಾಯ ನೀಡಿದ ದಾನಿಗಳಾದ ರಂಜನಿ ಸುಧಾಕರ್ ಹೆಗ್ಡೆ, ರವೀಂದ್ರನಾಥ್ ಭಂಡಾರಿ, ಮತ್ತು ಪರಿವಾರ, ಕೃಷ್ಣ ವಿ ಶೆಟ್ಟಿ, ಸುಕುಮಾರ್ ಶೆಟ್ಟಿ, ಜಗನ್ನಾಥ್ ಎನ್ ರೈ, ಚಂದ್ರಹಾಸ ರೈ ಬೊಳ್ನಾಡುಗುತ್ತು, ರತ್ನಾಕರ್ ಶೆಟ್ಟಿ ಮುಂಡ್ಕೂರು, ಲತಾ ಜಯರಾಂ ಶೆಟ್ಟಿ, ಚಿತ್ರ ಆರ್. ಶೆಟ್ಟಿ, ರತ್ಮಾ ಪಿ. ಶೆಟ್ಟಿ, ಮನೋರಮ ಎನ್.ಬಿ. ಶೆಟ್ಟಿ, ಹರೀಶ್ ವಾಸು ಶೆಟ್ಟಿ, ರಘುರಾಮ್ ಶೆಟ್ಟಿ ಅವೆನ್ಯೂ, ಅಪ್ಪಣ್ಣ ಶೆಟ್ಟಿ ಪಾವೈ ಇವರಲ್ಲರಿಗೂ ದೇವರ ಪ್ರಸಾದವನ್ನು ನೀಡಲಾಯಿತು.ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್ ಎಮ್. ಭಂಡಾರಿ ಅವರು 3 ವರ್ಷದ ಕಾಲಾವಧಿಯಲ್ಲಿ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿ ದೇವಸ್ಥಾನದ ಹೊರ ಆವರಣದಲ್ಲಿ ಕಿರು ಸಭಾಂಗಣದವನ್ನು ನಿರ್ಮಿಸಿದ್ದು, ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ರವೀಂದ್ರನಾಥ್ ಎಮ್. ಭಂಡಾರಿ ಅವರು ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತಾ 3 ವರ್ಷದ ಕಲಾವಾದಿಯಲ್ಲಿ ಜ್ಞಾನ ಮಂದಿರದ ಸೇವೆ ಮಾಡಲು ಅವಕಾಶ ನೀಡಿದ ಬಂಟರ ಸಂಘದ ಪದಾಧಿಕಾರಿಗಳಿಗೂ ಸರ್ವ ಸದಸ್ಯರುಗಳಿಗೂ, ದಾನಿಗಳಿಗೂ ಹೃತೂರ್ವಕ ಕೃತಜ್ಞತೆಯನ್ನು ಅರ್ಪಿಸಿದರು.