Header Ads
Header Ads
Header Ads
Breaking News

ಶ್ರೀ ವೈದ್ಯನಾಥ ರೆಸಿಡೆನ್ಸಿ ಲೋಕಾರ್ಪಣೆ ಗಣೇಶ್ ಸುವರ್ಣ ಮಾಲಕತ್ವದ ವಸತಿ ಸಂಕೀರ್ಣ ತುಂಬೆ ಗ್ರಾಮದ ರಾಮಲ್ ಕಟ್ಟೆಯಲ್ಲಿ ಪ್ರಾರಂಭ ಗಣೇಶ್ ಸುವರ್ಣ ಮಾಲಕತ್ವದ ವಸತಿ ಸಂಕೀರ್ಣ

 

ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಗ್ರಾಮದ ರಾಮಲ್‌ಕಟ್ಟೆಯಲ್ಲಿ ಶ್ರೀ ವೈದ್ಯನಾಥ ರೆಸಿಡೆನ್ಸಿ ಲೋಕಾರ್ಪಣೆಗೊಂಡಿತು.ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ಅವರ ಮಾಲಕತ್ವದ ಈ ವಸತಿ ಸಂಕೀರ್ಣ ಸುಸಜ್ಜಿತ ಹಾಗೂ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದ್ದು ಗ್ರಾಹಕರ ಗಮನ ಸೆಳೆದಿದೆ.
ರಾಷ್ಟ್ರೀಯ ಹೆದ್ದಾರಿಯ ಬದಿಯ ರಮಣೀಯ ಪರಿಸರದಲ್ಲಿ ಈ ವಸತಿ ಸಂಕೀರ್ಣ ನಿರ್ಮಾಣಗೊಂಡಿದೆ. ಕೆಲ ದಿನಗಳ ಹಿಂದೆಯೇ ಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗಿದ್ದು ಭಾನುವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭ ವಸತಿ ಸಂಕೀರ್ಣದ ಮಾಲಕ ಗಣೇಶ್ ಸುವರ್ಣ ಅವರು ವಿ೪ ನ್ಯೂಸ್‌ನೊಂದಿಗೆ ಮಾತನಾಡಿ ಶ್ರೀ ವೈದ್ಯನಾಥ ರೆಸಿಡೆನ್ಸಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ನಿರ್ಮಾಣಗೊಂಡಿದ್ದು ೨೪ ಗಂಟೆಗಳ ಕಾಲ ನೀರಿನ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಹಾಗೂ ಜನರೇಟರ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ೨ಬಿಎಚ್‌ಕೆಯ ಮನೆಗಳಿದ್ದು ಸಂಪೂರ್ಣ ವಾಸ್ತುವಿಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply