Header Ads
Header Ads
Breaking News

ಶ್ರೀ ಸಿಂಚನ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಲಿಮಿಟೆಡ್‌ನ2ನೇ ಶಾಖೆ. ಮಂಗಳೂರಿನ ಕರಂಗಲ್ಪಾಡಿಯ ಬ್ರಿಗೇಡ್ ಪ್ಲಾಸಾ ಮಳಿಗೆಯಲ್ಲಿ ಉದ್ಘಾಟನೆ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರು ಪಡೆದಿರುವ ಶ್ರೀ ಸಿಂಚನ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಲಿಮಿಟೆಡ್‌ನ 2ನೇ ಶಾಖೆ ನಗರದ ಕರಂಗಲ್ಪಾಡಿಯ ಬ್ರಿಗೇಡ್ ಪ್ಲಾಸಾ ಮಳಿಗೆಯಲ್ಲಿ ಉದ್ಘಾಟನೆಗೊಂಡಿತು. ಮೂಡಬಿದ್ರೆಯಲ್ಲಿ ಈಗಾಗಲೇ ಹೆಸರು ಪಡೆದುಕೊಂಡಿರುವ ಶ್ರೀ ಸಿಂಚನ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಲಿಮಿಟೆಡ್‌ನ ತನ್ನ 2ನೇ ಶಾಖೆಯನ್ನು ಮಂಗಳೂರಲ್ಲೂ ಆರಂಭಿಸಿವೆ. ನಗರದ ಕರಂಗಲ್ಪಾಡಿಯ ಬ್ರಿಗೇಡ್ ಪ್ಲಾಸಾ ಮಳಿಗೆಯಲ್ಲಿ ನೂತನ ಶಾಖೆಯನ್ನು ಶ್ರೀದೇವಿ ಶಿಕ್ಷಣ ಸಂಸ್ಥೆಯ ಚೆರ್‌ಮೆನ್ ಸದಾನಂದ ಶೆಟ್ಟಿ ಅವರು ಉದ್ಘಾಟಿಸಿದ್ರು.

ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಲಿ, ಇನ್ನಷ್ಟ ಅಭಿವೃದ್ಧಿಪಥದ ಸಾಗಲಿ ಎಂದು ಶುಭಾ ಹಾರೈಸಿದರು.ಸಿಂಚನಾ 020 ಮೊಬೈಲ್ ಸರ್ವೀಸ್ ಆಪ್‌ನ್ನು ಖ್ಯಾತ ಲೆಕ್ಕ ಪರಿಶೋಧಕರಾದ ಎಸ್.ಎಸ್.ನಾಯಕ್ ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, 5ವರುಷದಲ್ಲಿ ಉತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಹೀಗಾಗಿ ಇವರ ಉದ್ದಿಮೆ ಇನ್ನು ಪ್ರಗತಿಪಥ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಿಂಚನ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಲಿಮಿಟೆಡ್‌ನ ಅಧ್ಯಕ್ಷರಾದ ಮೋಹನ್ ಪ್ರಭು ವಹಿಸಿದ್ರು. ಈ ವೇಳೆ ಹಿರಿಯ ಅಧಿಕಾರಿ ಹಾಗೂ ಸೌಹಾರ್ದ ಅಭಿವೃದ್ದಿ ಅಧಿಕಾರಿ ಗುರುಪ್ರಸಾದ್ ಬಂಗೇರ, ಐಸಿರಿ ಹರ್ಬಲ್ಸ್ ಮಾಲಕರಾದ ಜಿನರಾಜಯ್ಯ, ಪ್ರಾದೇಶಿಕ ಸಾರಿಗೆ ಕಚೇರಿಯ ಸಲಹೆಗಾರರಾದ ಉಪೇಂದ್ರ ಬಾಳಿಗ, ಉಪಾಧ್ಯಕ್ಷರಾದ ಡಾ.ವೈ.ಎನ್. ಮುರಳಿಧರ್ ಭಟ್, ವ್ಯವಸ್ಥಾಪಕರಾದ ಕಿರಣ್ ಕುಮಾರ್.ಬಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಎಂ.ಶೆಟ್ಟಿ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತಿರಿದ್ದರು.

Related posts

Leave a Reply