
ಬೈಂದೂರಿನ ಶ್ರೀ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ (ರಿ) ಇದರ ವತಿಯಿಂದ ದ್ವಿತೀಯ ವರ್ಷದ ಕ್ರೀಡಾ ಮತ್ತು ಸಾಂಸ್ಕøತಿಕ ಚಿಲುಮೆ ಬೈಂದೂರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ಆಟಗಾರರ ನಾಕೌಟ್ ಮಾದರಿಯ 60 ಗಜಗಳ ಕ್ರಿಕೆಟ್ ಪಂದ್ಯಾಟ ಶ್ರೀ ಸನೇಶ್ವರ ಟ್ರೋಫಿ 2021 ಪಂದ್ಯಾಟ ಫೆ.20 ಮತ್ತು 21ರಂದು ನಡೆಯಲಿದೆ.ವಿಜೇತರಿಗೆ ಪ್ರಥಮ ಬಹುಮಾನವಾಗಿ 50,555ರೂ., ದ್ವಿತೀಯ ಬಹುಮಾನವಾಗಿ 25,555ರೂ ಹಾಗೂ ಶಾಶ್ವತ ಫಲಕ ಸಿಗಲಿದೆ. ಜೊತೆಗೆ ಪ್ರತಿ ಪಂದ್ಯಾಟಕ್ಕೂ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ಗೂಟರಕ್ಷಕ, ಹಾಗೂ ಇನ್ನಿತರ ವೈಯಕ್ತಿಕ ಪ್ರಶಸ್ತಿಗಳು ಸಿಗಲಿವೆ.