
ರಿಯಾದ್: ಸೌದಿ ಅರೇಬಿಯಾದ ರಿಯಾದಿನಲ್ಲಿರುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂಡುಗೆರೆಯ ಕುಮಾರ್ ಎಂಬವರು ಕೆಲವು ತೊಂದರೆಗಳಿಗೆ ಸಿಲುಕಿ ಊರಿಗೂ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಕೆಸಿಎಫ್ ಸೌದಿ ಅರೇಬಿಯಾ ಅವರ ನೆರವಾಗಿ ಅವರನ್ನು ಊರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಕುಮಾರ್ ರವರು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲವು ತೊಂದರೆಗಳು ಆಗಿ ಕಂಪನಿಯವರು ಕುಮಾರ್ ಮೇಲೆ ದೂರು ದಾಖಲಿಸಿದ್ದರು. ಕೇಸ್ ನ್ಯಾಯಾಲಯ ತಲುಪಿ ಅದರ ತೀರ್ಪು ಕುಮಾರ್ ವಿರುದ್ದವಾಗಿ ಬಂದ ಕಾರಣ ಅವರು ಊರಿಗೂ ಹೋಗಲು ಆಗದ ಪರಿಸ್ಥಿತಿ ಎದುರಾಗಿತ್ತು. ಈ ವಿಷಯವನ್ನು ಕುಮಾರ್ ರವರು ಕೆಸಿಎಫ್ ಜುಬೈಲ್ ಕಾರ್ಯಕರ್ತನಾದ ಮುಫೀದ್ ರವರರಿಗೆ ತಿಳಿಸಿದರು. ಕೂಡಲೇ ಮುಫೀದ್ ರವರು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟುರವರ ಗಮನಕ್ಕೆ ತಂದರು. ಕೆಸಿಎಫ್ ನೇತಾರರುಗಳಾದ ಮುಹಮ್ಮದ್ ಮಲೆಬೆಟ್ಟು, ಬಶೀರ್ ತಲಪ್ಪಾಡಿ ಹಾಗೂ ಹನೀಫ್ ಕಣ್ಣೂರು ರವರ ಪರಿಶ್ರಮದ ಫಲವಾಗಿ ಕುಮಾರ್ ರವರು ಭಾರತದ ರಾಯಭಾರಿ ಕಛೇರಿ ಮುಖಾಂತರ ಊರಿಗೆ ತಲುಪಿದ್ದಾರೆ.