Header Ads
Header Ads
Header Ads
Breaking News

ಸಂಘಟನೆಗಳು ರಚನಾತ್ಮಕವಾಗಿ ತೊಡಗಿಸಿಕೊಳ್ಳಿ ಮುನ್ನೂರು ಸಂಘಟನೆಗಳಿಂದ ಸಮಾಜಮುಖಿ ಕಾರ್ಯ ಡಿವೈ‌ಎಫ್‌ಐ ಜಿಲ್ಲಾ ಮುಖಂಡ ಚರಣ್ ಶೆಟ್ಟಿ ಅಭಿಪ್ರಾಯ

ಮುನ್ನೂರು, ಸಂಘಟನೆಗಳು ರಚನಾತ್ಮಕವಾಗಿ ತೊಡಗಿಸಿಕೊಂಡಾಗ ಸಮಾಜಮುಖಿ ಕಾರ್ಯ ನಡೆಸಲು ಸಾಧ್ಯ ಎಂದು ಡಿವೈ‌ಎಫ್‌ಐ ಜಿಲ್ಲಾ ಮುಖಂಡ ನ್ಯಾಯವಾದಿ ಚರಣ್ ಶೆಟ್ಟಿ ಪಂಜಿಮೊಗರು ಅಭಿಪ್ರಾಯಪಟ್ಟರು.

ಕುತ್ತಾರಿನ ದ.ಕಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಬಟ್ಟೆದಡಿ ಘಟಕ, ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ. ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಕುತ್ತಾರು ಇದರ ಜಂಟಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

 

ಮುಖ್ಯ ಅತಿಥಿಗಳಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ವೈದ್ಯಕೀಯ ಅಽಕ್ಷಕ ಮರಳೀಧರ್ ಪೈ ಮಾತನಾಡಿ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ಡಿವೈ‌ಎಫ್‌ಐ ಬಟ್ಟೆದಡಿ ಘಟಕದ ಅಧ್ಯಕ್ಷ ಶ್ರಾವಣ್ ತೇವುಲ, ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ ಇದರ ಅಧ್ಯಕ್ಷ ಮಹಾಬಲ ಟಿ. ದೆಪ್ಪೆಲಿಮಾರ್, ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಕುತ್ತಾರು ಇದರ ಅಧ್ಯಕ್ಷ ದಿವ್ಯನ್ ತೇವುಲ, ದ.ಕ.ಜಿಲ್ಲಾ ಪಂಚಾಯತ್ ಹಿರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಾರದಾ, ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ್ ರಾಣಿಪುರ, ದಿವ್ಯರಾಜ್ ತೇವುಲ ಸ್ವಾಗತಿಸಿದರು. ದೀಕ್ಷಿತ್ ತೇವುಲ , ಮಿಥುನ್‌ರಾಜ್ ಉಪಸ್ಥಿತರಿದ್ದರು.

ವರದಿ: ಆರಿಫ್ ಕಲ್ಕಟ್ಟ

Related posts

Leave a Reply