Header Ads
Header Ads
Breaking News

ಸಂಘಟನೆಗಳ ಹಾಗೂ ರಾಜಕೀಯ ನಾಯಕರ ಕುಮ್ಮಿಕ್ಕಿನಿಂದ ಕೋಮು ಸಂಘರ್ಷ ಇದಕ್ಕೆಲ್ಲ ಬಲಪಂಥೀಯರು, ಪಿ‌ಎಫ್‌ಐನವರ ಓವರ್ ಆಕ್ಟಿಂಗ್ ಕಾರಣ ಮಂಗಳೂರಿನಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಕೆಲವೊಂದು ಸಂಘಟನೆಗಳ ಹಾಗೂ ರಾಜಕೀಯ ನಾಯಕರ ಕುಮ್ಮಿಕ್ಕಿನಿಂದಲೇ ಕರಾವಳಿಯಲ್ಲಿ ಕೋಮು ಸಂಘಷವಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಅವರು ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸ್ ವಸತಿ ಗೃಹಕ್ಕೆ ಶಿಲಾನ್ಯಾಸಗೈದು ಮಾಧ್ಯಮದೊಂದಿಗೆ ಮಾತನಾಡಿ, ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅದರೆ ಇಲ್ಲಿರುವ ಬಲಪಂಥಿಯರು ಹಾಗೂ ಪಿ‌ಎಫ್‌ಐನವರ ಓವರ್ ಆಕ್ಟಿಂಗ್‌ನಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗಿದೆ. ರಾಜ್ಯದ 29 ಜಿಲ್ಲೆಗಳಲ್ಲಿ ಶಾಂತಿಯ ವಾತಾವರಣವಿದೆ. ಕರಾವಳಿಯಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ ಎಂಬುವುದು ಜನರಿಗೆ ಅರ್ಥವಾಗಿದೆ. ರಾಜಕೀಯ ನಾಯಕರು ಹಾಗೂ ಸಂಘಟನೆಗಳು ಸ್ವಲ್ಪ ಸುಮ್ಮನಿದ್ದರೆ ಎಲ್ಲಾವೂ ಸರಿಯಾಗುತ್ತದೆ ಎಂದು ಹೇಳಿದರು.

ಸಂಘಟನೆಗಳ ನಿಷೇಧ ತಕ್ಷಣಕ್ಕೆ ಯಾವುದೇ ಪ್ರಸ್ತಾಪವಿಲ್ಲ, ಮಾಡಿದ್ರೆ ಎರಡೂ ಕಡೆಯ ಸಂಘಟನೆಗಳನ್ನು ನಿಷೇಧ ಮಾಡಬೇಕಾಗುತ್ತದೆ. ಈಗಾಗಲೇ ಸಿ‌ಎಂ ಸಿದ್ದರಾಮಯ್ಯನವರು ರಾಜ್ಯ ಪ್ರವಾಸದಲ್ಲಿದ್ದಾರೆ, ಆನಂತರ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಅವರು ಹೇಳಿದರು.