Header Ads
Header Ads
Breaking News

ಸಂಘಟನೆ ಕಟ್ಟುವುದು ಅಷ್ಟು ಸುಲಭವಲ್ಲ ,ಶಾಸಕ “ಉಮಾನಾಥ ಕೋಟ್ಯಾನ್” ಅಭಿಪ್ರಾಯ

ಊರಿಗೊಂದು ಸಂಘ ಸ್ಥಾಪಿಸಿ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಕೊಳ್ಳುವುದು ಅಗತ್ಯ. ಆದರೆ ಸಂಘಟನೆ ಮಾಡುವುದು ಅಷ್ಟು ಸುಲಭವಲ್ಲ. ಮೂರು ಸಲ ರಾಜ್ಯ ಪ್ರಶಸ್ತಿ ಪಡೆದ ವಿದ್ಯಾವಿನಾಯಕ ಯುವಕ ಸಂಘದ ಕಾರ್ಯಗಳು ಸ್ತುತ್ಯರ್ಹ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಹಳೆಯಂಗಡಿಯ ರಾಮಾನುಗ್ರಹ ಸಭಾಗೃಹದಲ್ಲಿ ನಡೆದ ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲದ 47ನೇ ವಾರ್ಷಿಕೋತ್ಸವ, ರಜತಸೇವಾ ಟ್ರಸ್ಟ್, ಹಾಗೂ ಯುವತಿ ಮತ್ತು ಮಹಿಳಾ ಮಂಡಲದ ೪೨ನೇ ವಾರ್ಷಿಕೋತ್ಸವ ಮತ್ತು ಎಚ್. ನಾರಾಯಣ ಸನಿಲ್ ದತ್ತಿ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾತನಾಡಿ ದತ್ತಿ ಉಪನ್ಯಾಸವನ್ನು ರಘುಪತಿ ಭಟ್ ಸಸಿಹಿತ್ಲು ನೀಡಿದರು.

 

ಸಾಧಕ ವಿದ್ಯಾರ್ಥಿಗಳಾದ ಶ್ರೀಪದ ಶೆಣೈ, ಶ್ರೀಪದ ಭಟ್, ಪೂಜಾಶ್ರೀ, ಲಾವಣ್ಯ, ಚಂದನಾ ಹಾಗೂ ಇತರರಿಗೆ ದತ್ತಿ ಬಹುಮಾನ ನೀಡಲಾಯಿತು.ಪುಂಡಲೀಕ ಹೊಸಬೆಟ್ಟು, ದಿನೇಶ್ ಕುಮಾರ್ ಹಳೆಯಂಗಡಿ, ಪ್ರವೀಣ್ ಕುಮಾರ್ ಬೊಳ್ಳೂರು, ಸೂರ್ಯಕುಮಾರ್, ಮುಖ್ಯ ಶಿಕ್ಷಕಿ ಐರಿನ್. ಪ್ರಕಾಶ್ ಶೆಟ್ಟಿ, ಸದಾಶಿವ, ಸುಜಾತಾ ವಾಸುದೇವ್, ದಿವ್ಯಾ ಮತ್ತಿತರರಿದ್ದರು. 

Related posts

Leave a Reply