Header Ads
Header Ads
Breaking News

ಸಂಘರ್ಷದ ನಡುವಲ್ಲೇ ಸಾರ್ಥಕತೆಅಡಗಿದೆ : ಗೌರ್‌ಗೋಪಾಲದಾಸ್

ಧರ್ಮಸ್ಥಳ, ನ.27 : ಶತಮೂರ್ಖನೂದ್ವೇಷಿಸಬಲ್ಲ ಆದರೆ, ಪ್ರೀತಿಸುವುದು ಸಹೃದಯರಿಗೆ ಮಾತ್ರ ಸಾಧ್ಯವಾಗುವ ವಿಷಯ. ಮನಸ್ಸಿನಲ್ಲಿ ಖುಷಿಗೆ ಜಾಗ ಮೀಸಲಿಡದಿದ್ದರೆ ಬದುಕಿನ ಉದ್ದೇಶವೇ ಅರ್ಥಹೀನವಾಗುತ್ತದೆ ಎಂದು ವ್ಯಕ್ತಿತ್ವ ವಿಕಸನ ಮಾರ್ಗದರ್ಶಿ, ಆಧ್ಯಾತ್ಮಿಕಚಿಂತಕಗೌರ್‌ಗೋಪಾಲದಾಸ್‌ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತಅಮೃತವರ್ಷಿಣಿ ಸಭಾಂಗಣದಲ್ಲಿ ಸೋಮವಾರಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತಅತ್ಯುನ್ನತ ಮೌಲ್ಯಗಳನ್ನು ಒಳಗೊಂಡ ರಾ?. ಇತರೆ ದೇಶಗಳ ವೈಶಿ?ತೆಯನ್ನು ಗುರುತಿಸುವ ಹಾಗೆ ಭಾರತದ ವಿಶಿತೆಯನ್ನು ಒಂದು ಪದದಲ್ಲಿಇಂತಿ?ಎಂದು ಹೇಳಿ ಮುಗಿಸುವುದುಕ ಆದ್ದರಿಂದಲೇ ಭಾರತವನ್ನು “ಇನ್‌ಕ್ರೆಡಿಬಲ್ ಇಂಡಿಯಾ” ಎನ್ನುವುದು ಎಂದರು. ಭಾರತೀಯರು ವಿಭಿನ್ನತೆಯನ್ನು ಮೈಗೂಡಿಸಿಕೊಂಡು ಬೆಳೆಯುವವರು. ಚುರುಕುತನ, ಉಳಿತಾಯ ಮಾಡುವಛಾತಿ ಹಾಗೂ ಖರ್ಚು ಮಾಡುವ ಮನಸ್ಸುಇವೆಲ್ಲವೂ ನಮ್ಮಲ್ಲಿರುತ್ತದೆ. ಆದರೆ, ಇವುಗಳ ನಮ್ಮ ವಿಶಿತೆಯನ್ನು ವರ್ಣಿಸುವ ಅಂಶಗಳಲ್ಲ. ಖಾಲಿಯಾದ ಶಾಂಪೂ ಬಾಟಲಿಗೆ ನೀರು ತುಂಬಿಸಿ ಪೂರ್ತಿಖರ್ಚು ಮಾಡುವುದರಿಂದ ಹಿಡಿದು, ಹಾಳಾದ ಅಂಗಿಯ ಬಳಕೆಯನ್ನು ಒಂದೊಂದೇ ಹಂತದ ಮೂಲಕ ಬದಲಾಯಿಸುತ್ತಾ ಕೊನೆಗೆ ನೆಲ ಒರೆಸುವ ಬಟ್ಟೆಯಾಗಿ ಬಳಸುವ ತನಕ ಭಾರತೀಯರ ವಿಭಿನ್ನತೆಯನ್ನುಗುರುತಿಸಬಹುದು. ಆದರೆ, ಇವೆಲ್ಲವನ್ನೂ ಮೀರಿದ, ಇವುಗಳಾಚೆಯ ಭಾರತೀಯತೆಇರುವುದು ಈ ನೆಲದಆಧ್ಯಾತ್ಮಿಕಜ್ಞಾನದಲ್ಲಿ. ಭಾರತೀಯ ಪರಂಪರೆಯುದ್ದಕ್ಕೂಆಧ್ಯಾತ್ಮಿಕ ವೈಶಿ?ವನ್ನು ನೋಡಬಹುದುಎಂದು ಹೇಳಿದರು. ಅಂತೆಯೇ, ಬದಲಾಗುತ್ತಿರುವಜೀವನಕ್ರಮದಿಂದ ನೈಜಖುಷಿಯಅರ್ಥ ಕಂಡುಕೊಳ್ಳುವಲ್ಲಿ ಜನರು ವಿಫಲವಾಗುತ್ತಿರುವುದನ್ನು ಉದ್ದೇಶಿಸಿ ಮಾತನಾಡಿ ಸಿರಿವಂತಿಕೆಯಾಗಲಿ, ನಾವು ಬಳಸುವ ವಸ್ತುಗಳಾಗಲಿ ನಮಗೆ ಖುಷಿಯನ್ನುತಂದುಕೊಡುವುದಿಲ್ಲ ಬದಲಾಗಿ ನಾವು ವಿ?ಯಗಳನ್ನು ಹೇಗೆ ಸ್ವೀಕರಿಸುತ್ತೇವೆ, ನಮ್ಮ ಸುತ್ತಲಿನ ಜನರು ಹೇಗಿರುತ್ತಾರೆ, ನಾವು ಈ ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆಎನ್ನುವುದರಲ್ಲಿ ನೈಜ ಖುಷಿ ಅಡಗಿದೆಎಂದು ತಿಳಿಸಿದರು. ತಿನ್ನುವ ಐಸ್‌ಕ್ರೀಂ ಕೂಡ ಕರಗುತ್ತದೆ, ಉರಿಯುವ ಮೇಣದ ಬತ್ತಿಯೂಕರಗುತ್ತದೆ. ಆದರೆ, ಅವುಗಳ ಉದ್ದೇಶವನ್ನು ಗಮನಿಸಿದಾಗ ಮಾತ್ರಯಾವುದು ಒಳ್ಳೆಯ ಉದ್ದೇಶಕ್ಕೆಕರಗಿದೆಎಂಬುದುಅರ್ಥವಾಗುತ್ತದೆ. ಬದುಕಿನಆಟವೇ ಸಂಘರ್ಷವಾಗಿದ್ದು ಈ ಸಂಘರ್ಷದ ನಡುವಲ್ಲಿ ನಾವು ಹೇಗೆ ಬದುಕುತ್ತೇವೆ, ಏನೇನು ಮಾಡುತ್ತೇವೆ ಎಂಬ ಆಧಾರದ ಮೇಲೆ ಬದುಕಿನ ಸಾರ್ಥಕತೆಅಡಗಿದೆಎಂದು ಕಿವಿಮಾತು ಹೇಳಿದರು.

ವರದಿ ಮತ್ತು ಚಿತ್ರಗಳು : ಸ್ಕಂದ ಆಗುಂಬೆ.

Related posts

Leave a Reply

Your email address will not be published. Required fields are marked *