Header Ads
Header Ads
Breaking News

ಸಂಘ ಸಂಸ್ಥೆಗಳಿಂದ ಸಮಾಜಮುಖಿ ಕಾರ್ಯಗಳಾಗಬೇಕು ಪುತ್ತೂರಿನಲ್ಲಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿಕೆ

ಪುತ್ತೂರು: ಸಮಾಜದಿಂದ ನಾವು ಏನನ್ನು ಪಡೆದಿದ್ದೇವೋ, ಅದನ್ನು ಮರಳಿ ಸಮಾಜಕ್ಕೆ ನೀಡುವ ಮನೋಪ್ರವೃತ್ತಿ ಪ್ರತಿಯೊಬ್ಬರಲ್ಲೂ ಬರಬೇಕು. ಆಗ ಮಾತ್ರ ನಮ್ಮ ಋಣ ಈಡೇರಲು ಸಾಧ್ಯವಿದೆ. ಸವಲತ್ತುಗಳಿಗೆ ಕೇವಲ ಸರಕಾರಗಳನ್ನೇ ಅವಲಂಬಿಸಿದರೆ ಸಾಲದು. ಸಂಘ-ಸಂಸ್ಥೆಗಳು ಕೂಡಾ ಮುಂದೆ ಬರಬೇಕು. ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.ಅವರು ದರ್ಬೆಯ ಬೈಪಾಸ್‌ನಲ್ಲಿರುವ ರೈ ಎಸ್ಟೇಟ್ಸ್ ಜನಸೇವಾ ಕೇಂದ್ರದ ಕಚೇರಿಯ ಮುಂಭಾಗದಲ್ಲಿ ನಡೆದ ಟ್ರಸ್ಟ್‌ನ ಫಲಾನುಭವಿಗಳ ಮತ್ತು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಟ್ರಸ್ಟ್‌ನ ಪ್ರವರ್ತಕ ಯುವ ನೇತಾರ ಕೆ.ಎಸ್. ಅಶೋಕ್ ಕುಮಾರ್ ರೈಯವರು ಸಮಾಜಮುಖಿ ಕಾರ್ಯ ಮಾಡುವ ಮೂಲಕ ಪುತ್ತೂರಿನ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ ಶ್ಲಾಘನೀಯ ಎಂದರು.ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಟ್ರಸ್ಟ್ ಮೂಲಕ ಅಸಹಾಯಕರಿಗೆ ವಿವಿಧ ರೀತಿಯ ಸಹಕಾರ, ಸರಕಾರದ ಸವಲತ್ತು ಪಡೆಯುವಲ್ಲಿ ವಂಚಿತರಾದವರಿಗೆ, ಆಶಕ್ತರ ನೋವಿಗೆ ಸ್ಪಂಧಿಸುತ್ತಿರುವ ಸೇವೆ ಇಂದು ಸಮಾಜ್ಕಕೆ ಆವಶ್ಯಕವಾಗಿದೆ. ಎಂದರು. ಪಂಡಿತ್ ದೀನ್ ದಯಾಳ್‌ರವರ ಉದ್ದೇಶ, ಪ್ರಧಾನಿ ಮೋದಿಯವರ ಯೋಚನೆ, ಯೋಜನೆಗಳಿಗೆ ಪೂರಕವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಯೋಜೆನಗಳನ್ನು ತಲುಪಿಸುವಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಅಶೋಕ್ ರೈಗಳ ಕಾರ್ಯ ನಿಜಕ್ಕೂ ಮಾದರಿಯಾಗಿದೆ ಎಂದರು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಪ್ರಮುಖ್ ಅಪ್ಪಯ್ಯ ಮಣಿಯಾಣಿ, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಅಶೋಕ್ ರೈಯವರ ತಾಯಿ ಗಿರಿಜಾ ಎಸ್ ರೈ, ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಮುನೀರ್ ನಿನ್ನಿಕಲ್ ಉಪಸ್ಥಿತರಿದ್ದರು.

Related posts