Header Ads
Breaking News

ಸಂಚರಿಸುತ್ತಿದ್ದ ಬೈಕ್‍ಗೆ ಆಕಸ್ಮಿಕ ಬೆಂಕಿ : ಮಂಜೇಶ್ವರದ ಸುಂಕದ ಕಟ್ಟೆ ಬಳಿ ನಡೆದ ಘಟನೆ

ಮಂಜೇಶ್ವರ: ಸಂಚರಿಸುತಿದ್ದ ಬೈಕ್ ಅಕಸ್ಮಿಕವಾಗಿ ಬೆಂಕಿ ತಗುಲಿ ಬೈಕ್ ಸುಟ್ಟು ಕರಕಲಾದ ಘಟನೆ ಮಂಜೇಶ್ವರ ಸುಂಕದ ಕಟ್ಟೆ ಬೇಕರಿ ಜಂಕ್ಷನಿನಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಅದೃಷ್ಟವಶಾತ್ ಪಾರಾಗಿದ್ದಾರೆ. ಭರತ್ ಎಂಬವರ ಮಾಲಕತ್ವದಲ್ಲಿರುವ ಎನ್‍ಎಸ್ ಪಲ್ಸರ್ ಬೈಕ್ ಹೊತ್ತಿ ಉರಿದು ನಾಶವಾಗಿದೆ. ಸ್ಥಳೀಯ ನಿವಾಸಿ ಭರತ್ ಆಹಾರ ಸಾಮಾಗ್ರಿ ಖರೀದಿಸಲೆಂದು ಬೇಕರಿ ಜಂಕ್ಷನ್ ಆಗಮಿಸಿದಾಗ ಈ ದುರಂತ ಸಂಭವಿಸಿದೆ. ಕೂಡಲೇ ಸ್ಥಳೀಯರು ಮಣ್ಣು ಎಸೆದು ಗೋಣಿ ಹಾಕಿ ನೀರು ಸುರಿದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಫಲಪ್ರದವಾಗಲಿಲ್ಲ.

Related posts

Leave a Reply

Your email address will not be published. Required fields are marked *