Header Ads
Breaking News

ಸಂಚಾರ ನಿಯಮ ಉಲ್ಲಂಘಿಸಿದ ರ್‍ಯಾಪಿಡೊ : ಕದ್ರಿ ಠಾಣೆಯಲ್ಲಿ ದೂರು ದಾಖಲು

ಬೈಕ್ ಟ್ಯಾಕ್ಸಿ ಸೇವಾ ಸಂಸ್ಥೆಯಾಗಿರುವ ರ್ಯಾಪಿಡೊ ನಗರದಲ್ಲಿ ಸಂಚಾರ ನಿಯಮಗಳನ್ನ ಪಾಲಿಸದೇ ಕಾನೂನು ಬಾಹಿರವಾಗಿ ದ್ವಿಚಕ್ರವಾಹನಗಳಲ್ಲಿ ಪ್ರಯಾಣಿಕರನ್ನು ಕೂರಿಸಿ, ಬಾಡಿಗೆ ಮಾಡಿರುತ್ತಿರುವ ವಿರುದ್ಧ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಹಲವು ಕಡೆಗಳಲ್ಲಿ ಈ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಸ್ವತಃ ರಿಕ್ಷಾ ಚಾಲಕರೇ  ರ್‍ಯಾಪಿಡೊ ದ್ವಿಚಕ್ರವಾಹನಗಳನ್ನ ತಡೆದ ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಿದ್ರು.

ಈ ಬಗ್ಗೆ ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರದಲ್ಲಿ ಪ್ರಯಾಣಿಕರ ಸಂಚಾರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ನಗರದ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಒಂದು ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ. ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲು ಮಾಡಿ, ವಾಹನಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ರಿಕ್ಷಾ ಚಾಲಕ ಅರುಣ್ ಕುಮಾರ್ ದೂರು ನೀಡಿದ್ದಾರೆ. ನಗರದಲ್ಲಿ ಆ್ಯಪ್ ಆಧಾರಿತ rapidoಎಂಬ ಸಂಸ್ಥೆಯ ಕೆಎ 19 ಇಕೆ 0455 ದ್ವಿಚಕ್ರ ವಾಹನ ಪರವಾನಿಗೆ ಇಲ್ಲದೇ ಬಾಡಿಗೆ ಮಾಡಲಾಗುತ್ತಿದೆ. ಇಂತಹ ಹಲವು ದ್ವಿಚಕ್ರ ವಾಹನಗಳು ಪರವಾನಿಗೆ ಇಲ್ಲದೆ ಬಾಡಿಗೆ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ರಿಕ್ಷಾ ಚಾಲಕ ಅರುಣ್ ಕುಮಾರ್ ಒತ್ತಾಯಿಸಿದ್ರು. ಈ ವೇಳೆ ರಿಕ್ಷಾ ಚಾಲಕರು ಭಾಗಿಯಾಗಿದ್ರು.

Related posts

Leave a Reply

Your email address will not be published. Required fields are marked *