Breaking News

ಸಂಜೆಯ ಹೊತ್ತಿಗೆ ಸೆಕ್ಷನ್ ನಡುವೆ ಕಲ್ಲಡ್ಕದಲ್ಲಿ ಗುಂಪು ಘರ್ಷಣೆ, ಉದ್ವಿಘ್ನತೆ ನಡುವೆ ಅಂಗಡಿ ಪೇಟೆ ಸಂಪೂರ್ಣ ಬಂದ್

ಇತ್ತೀಚೆಗೆ ಚೂರಿ ಇರತದ ವಿಷಯವಾಗಿ ಸುದ್ದಿಯಲ್ಲಿರುವ ಕಲ್ಲಡ್ಕದಲ್ಲಿ ಮತ್ತೆ ಗುಂಪು ಘರ್ಷಣೆ ಸಂಜೆ ನಡೆದಿದೆ. ಚೂರಿ ಇರಿತದ ಪ್ರಕರಣದಿಂದಾಗಿ ಸೆಕ್ಷನ್ ಜಾರಿಗೊಳಿಸಲಾಗಿದೆ.
ಇದರ ನಡುವೆಯೇ, ಎರಡು ಗುಂಪುಗಳ ನಡುವೆ ಘರ್ಷಣೆಗಳಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿ ಮೂರ್ಖವಾಗಿ ವೈಯಕ್ತಿಕ ಕಾರಣದಿಂದ ಆರಂಭವಾದ ಗಲಾಟೆ ಬಳಿಕ ಗುಂಪು ಘರ್ಷಣೆಗೆ ತಿರುಗಿದೆ ಎಂದು ಹೇಳಲಾಗುತ್ತಿದೆ. ಘರ್ಷಣೆಯಿಂದ ವಾಹನಗಳಿಗೆ, ಅಂಗಡಿಗಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆ ಕಲ್ಲಡ್ಕದಲ್ಲಿ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಅಘೋಷಿತ ಬಂದ್ ಆಚರಿಸಲಾಗಿದೆ. ಪೇಟೆಯಲ್ಲಿ ಪೋಲಿಸರು ಜಮಾಯಿಸಿದ್ದು ಬಿಗಿ ಬಂದೋಬಸ್ತ್ ಮಾಡಲಾಗಿದೆ. ತಾಲೂಕು ಮತ್ತು ನೆರೆ ತಾಲೂಕಿನಲ್ಲಿ ಸೆಕ್ಷನ್ ಜಾರಿಗೊಳಿಸಲಾಗಿದೆ.

Related posts

Leave a Reply