Header Ads
Header Ads
Breaking News

ಸಂತೋಷ್ ಹೆಗ್ಡೆಯವರ ಮಾತಿಗೆ ನನ್ನ ಬೆಂಬಲವಿದೆ:  ಸಚಿವ ಯು.ಟಿ ಖಾದರ್ 

ಕುಂದಾಪುರ: ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿಯವರ ಸ್ಮಾರಕ ನಿರ್ಮಿಸಲು ಸಂತೋಷ್ ಹೆಗ್ಡೆಯವರು ಆಗ್ರಹಿಸಿದ್ದಾರೆ. ಸಂತೋಷ್ ಹೆಗ್ಡೆಯವರ ಮಾತಿಗೆ ನನ್ನ ಸಂಪೂರ್ಣ ಬೆಂಬಲಿದೆ. ಸ್ಮಾರಕ ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದರು.

ಭಾನುವಾರ ಯಡಾಡಿಗೆ ಭೇಟಿ ನೀಡಿ ಐಪಿಎಸ್ ಮಧುಕರ್ ಶೆಟ್ಟಿ ಪಾರ್ಥೀವ ಶರೀರ ದರ್ಶನ ಮಾಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಮಧುಕರ್ ಶೆಟ್ಟಿ ಸ್ಮಾರಕ ಸ್ಥಾಪನೆ ವಿಚಾರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ಬಂದಿದ್ದು, ಪೊಲೀಸ್ ತರಬೇತಿ ಶಾಲೆಗೂ ಮಧುಕರ್ ಹೆಸರಿಡಬೇಕೆಂಬುವುದು ಹಲವರ ಆಶಯ. ಜನರ ಹಾಗೂ ಪೊಲೀಸರ ಬೇಡಿಕೆಗಳಿಗೆ ನಾವು ಬೆಲೆ ಕೊಡುತ್ತೇವೆ. ಈ ಎರಡು ಪ್ರಸ್ತಾಪಗಳು ಸರ್ಕಾರದ ಮುಂದಿದ್ದು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಮಧುಕರ್ ಕುಟುಂಬಿಕರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಂತಿಮ ಸಂಸ್ಕಾರ ಅತ್ಯಂತ ಶ್ರದ್ದೆಯಿಂದ ಗೌರವಯುತವಾಗಿ ನೆರವೇರಿಸಿದೆ. ಮಧುಕರ್ ಶೆಟ್ಟಿ ಯುವಕರ ಪ್ರೇರಣಾ ಶಕ್ತಿಯಾಗಿದ್ದಾರೆ. ಭವಿಷ್ಯದಲ್ಲೂ ಅವರ ಸೇವೆ ಬೇರೆ ಬೇರೆ ರೀತಿಯಲ್ಲಿ ರಾಜ್ಯಕ್ಕೆ ಸಿಗುವಂತಿತ್ತು. ಅವರ ಪ್ರತಿಯೊಂದು ಕೆಲಸವೂ ನಮಗೆ ಮಾದರಿ. ಓರ್ವ ದಿಟ್ಟ ಅಧಿಕಾರಿಯನ್ನು ಕಳೆದುಕೊಂಡ ನೋವು ನಮ್ಮನ್ನು ಸದಾ ಕಾಡಲಿದೆ ಎಂದರು.

ಐದನೇ ತರಗತಿಯಿಂದ ಜೊತೆಯಾಗಿ ಓದಿದ್ದೆವು. ನನ್ನ ಮತ್ತು ಅವರಲ್ಲಿ ಬಹಳ ಆತ್ಮೀಯತೆ ಇತ್ತು. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲೂ ಜೊತೆಯಾಗಿ ಸ್ಪರ್ಧಿಸುತ್ತಿದ್ದೆವು ಎಂದು ಯು.ಟಿ ಖಾದರ್ ಮಧುಕರ್ ಶೆಟ್ಟಿಯವರೊಂದಿಗಿನ ಶಾಲಾ ಹಾಗೂ ಕಾಲೇಜು ದಿನಗಳನ್ನು ನೆನೆದು ಭಾವುಕರಾದರು.

Related posts

Leave a Reply