Header Ads
Header Ads
Breaking News

ಸಂತ ಅಲೋಶಿಯಸ್ ಐ.ಟಿ.ಐ. ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮ

ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಹ್ಯುಂಡೈ ಮೋಟಾರ್‍ಸ್ ಸಹಬಾಗಿತ್ವದ ವೃತ್ತಿ ತರಬೇತಿಯ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಮೊದಲಿಗೆ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು, ವಿದ್ಯಾರ್ಥಿನಿಯರು ಸ್ವಾಗತ ನೃತ್ಯದ ಮೂಲಕ ನೆರೆದಿರುವ ಸರ್ವರನ್ನು ರಂಜಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ವಿನ್ಸೆಂಟ್ ಮೆಂಡೋನ್ಸಾ ಇವರು ಕಾರ್ಯಕ್ರಮಕ್ಕೆ ಹಾಜರಾದ ಎಲ್ಲರನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ವ/ಫಾ/ ಡಯ್ನಾಶಿಯಸ್ ವಾಸ್‌ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಜೀವನದಲ್ಲಿ ಕೇವಲ ಹೊರಗಿನ ಜೀವನಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ನೀಡಬಾರದು ಬದಲಾಗಿ ನಮ್ಮ ಆಂತರಿಕ ಜೀವನದ ಬೆಳವಣಿಗೆ ಕೂಡ ಮುಖ್ಯ ಮತ್ತು ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಬೆಳವಣಿಗೆಗೆ ಕಾರಣಕರ್ತರಾದ ನಮ್ಮ ಹೆತ್ತವರನ್ನು ಕಡೆಗಣಿಸಬಾರದು ಎಂಬ ಸಂದೇಶವನ್ನು ನೀಡಿದರು. ಮುಖ್ಯ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ನಾವು ಜೀವನದ ಮೌಲ್ಯಗಳನ್ನು ಅರಿತುಕೊಳ್ಳಬೇಕು, ಕೇವಲ ವಿಧ್ಯೆ ಇದ್ದರೆ ಸಾಲದು, ಯಾವುದೇ ಸಾದನೆಗೆ ನಮ್ಮ ಶ್ರಮ ಕೂಡ ಮುಖ್ಯವಾಗಿರುತ್ತದೆ ಎಂದು ತಿಳಿಸಿದರುಗೌರವಾನ್ವಿತ ಅತಿಥಿಯಾದ ಶ್ರೀ ಸತೀಶ್ ಕುಮಾರ್ ರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಸಹಬಾಗಿತ್ವದ ಮುಖ್ಯ ಉದ್ದೇಶ ಕೈಗಾರಿಕಾ ಅವಶ್ಯಕತೆ ಮತ್ತು ವಾಸ್ತವಿಕ ಲಭ್ಯತೆ ನಡುವಿನ ಅಂತರವನ್ನು ಸರಿದೂಗಿಸುವುದಾಗಿದೆ ತರಬೇತಿ ಸಂಸ್ಥೆಗಳು ಕೈಗಾರಿಕೆಗಳ ಬೇಡಿಕೆಯನ್ನು ಪೂರೈಸಲು ಕೈಗಾರಿಕೆಗಳೊಂದಿಗೆ ಸಹಭಾಗಿತ್ವಗೊಂಡಿರುವುದು ಉತ್ತಮ ಫಲಿತಾಂಶವನ್ನು ನೀಡಿದೆ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕರಾದ ವಂ/ಫಾ/ಎರಿಕ್ ಮಥಾಯಸ್‌ರವರು ಜೀವನದಲ್ಲಿ ದಯಾಳುತನ, ಉದಾರತೆ, ತಾಳ್ಮೆ ಮತ್ತು ಸಹಾನುಭೂತಿ ಈ ನಾಲ್ಕು ವಿಚಾರಗಳನ್ನು ಬೆಳೆಸಿಕೊಂಡು ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕು ಎಂಬ ಸಂದೇಶವನ್ನು ನೀಡಿದರು. ಬಳಿಕ ಅತಿಥಿಗಣ್ಯರು ಹ್ಯುಂಡೈ ಮೋಟಾರ್‍ಸ್ ತರಬೇತಿಯನ್ನು ಮತ್ತು ಸಿ.ಒ.ಇ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಿದರು.

ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ವ/ಫಾ/ ಡಯ್ನಾಶಿಯಸ್ ವಾಸ್ ಎಸ್.ಜೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಒಲಿಂಪಸ್ ರೆಫ್ರಿಜರೇಶನ್ ಕಂಪೆನಿಯ ಮಾಲಕರಾದ ಶ್ರೀ ಸುಮಿತ್ ರಾವ್ ಇವರು ಹಾಜರಾಗಿದ್ದರು. ಗೌರವಾನ್ವಿತ ಅತಿಥಿಯಾಗಿ ಹ್ಯುಂಡೈ ಮೋಟಾರ್‍ಸ್ ಇಂಡಿಯಾ ಲಿಮಿಟೆಡ್ ಕಂಪನಿಯ ತರಬೇತಿ ವಿಭಾಗದ ಮೇನೇಜರ್ ಶ್ರೀ ಜಿ ಸತೀಶ್ ಕುಮಾರ್, ಏರಿಯಾ ಮೇನೇಜರ್ ಶ್ರೀ ಸುನಿಲ್ ಕುಮಾರ್, ಅದ್ವೈತ್ ಹ್ಯುಂಡೈ ಇದರ ಸರ್ವಿಸ್ ಮೇನೇಜರ್ ಶ್ರೀ ಸುಕೇಶ್ ಪಿ, ಕಾಂಚನ್ ಹ್ಯುಂಡೈ ಇದರ ಜನರಲ್ ಮೇನೇಜರ್ ಆಗಿರುವ ಶ್ರೀ ಗಣೇಶ್ ಪ್ರಸಾದ್ ಯುನೈಟೆಡ್ ಕಿಂಗ್ಡಮ್‌ನ ಸ್ವಯಂಸೇವಕರಾಗಿರುವ ಶ್ರೀ ಜೆಫ್, ಸಂಸ್ಥೆಯ ನಿರ್ದೇಶಕರಾದ ವ/ಫಾ/ ಎರಿಕ್ ಮಥಾಯಸ್ ಎಸ್.ಜೆ, ಪ್ರಾಂಶುಪಾಲರಾದ ಶ್ರೀ ವಿನ್ಸೆಂಟ್ ಮೆಂಡೋನ್ಸಾ, ಉಪಪ್ರಾಂಶುಪಾಲರಾದ ಶ್ರೀ ರೋಶನ್ ಡಿಸೋಜ ಮತ್ತು ತರಬೇತಿ ಅಧಿಕಾರಿಯಾದ ಶ್ರೀ ರೋಮಿಯಸ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply