Header Ads
Header Ads
Breaking News

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪರಿಸರ ಮತ್ತು ಸಾಹಿತ್ಯ ಎಂಬ ವಿಚಾರದ ಕುರಿತು ವಿಚಾರ ಸಂಕೀರ್ಣ

ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರರವರು ದೀಪ ಬೆಳಗಿಸುವ ಉದ್ಘಾಟಿಸಿದರು. ಬಳಿಕ ಮಾತನಾಡಿ ಪರಿಸರ ಹಾಗೂ ಸಾಹಿತ್ಯಕ್ಕೆ ಇರುವ ಸಂಬಂಧ, ಪ್ರಸ್ತುತ ಸಮಾಜದಲ್ಲಿ ಪರಿಸರದ ಹಾಗೂ ಜನರ ಜೀವನಕ್ಕೆ ಇರುವ ಸಂಬಂಧ ಮತ್ತು ದಲಿತರಿಗೂ ಶಿಕ್ಷಣ ಕೊಡಲಾರಂಭಿಸಿದ ಮೇಲೆ ಸಮಾಜದಲ್ಲಾದ ಬದಲಾವಣೆಯ ಬಗ್ಗೆ ಹೇಳಿದರು.

ಬಳಿಕ ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆವರೆಂಡ್ ಫಾದರ್ ಡೈನೀಶಿಯಸ್ ವಾಸ್ ಎಸ್.ಜೆ. ಮಾತನಾಡಿ ಸಮಾಜದ ರಕ್ಷಣೆಯ ಜೊತೆಗೆ ಮಾನವನ ವಿವೇಚನೆಯ ರಕ್ಷಣೆಯೂ ಮುಖ್ಯ. ವಿದ್ಯಾರ್ಥೀಗಳಲ್ಲಿ ಅವರಿವು ಮೂಡಿಸುವುದು, ಸಾಮಾಜಿಕ ನ್ಯಾಯ ಬೆಳೆಸುವುದು,ಮತ್ತು ಸಂಸ್ಕೃತಿಯನ್ನು ಬೆಳೆಸುವುದು ಈ ಮೂರು ವಿಚಾರಗಳು ಶಿಕ್ಷಣ ಸಂಸ್ಥೆ ಮುಖ್ಯ ಉದ್ದೇಶವಾಗಿರಬೇಕು ಎಂದು ಹೇಳಿದರು.

ಇದೇ ವೇಳೆ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರರವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಪ್ರವೀಣ್ ಮಾರ್ಟಿಸ್ ಎಸ್.ಜೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸರಸ್ವತಿ, ಹೈದರಬಾದ್ ಯುನಿವರ್ಸಿಟಿಯ ಪ್ರಮೋದ್ ಕೆ.ನಾಯಕ್, ಅದ್ಯಾಪಕಿಯಾದ ಮೆಲಿಸಾ ಗೋವೆಸ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply