Breaking News

ಸಂತ ಅಲೋಶಿಯಸ್ ಕಾಲೇಜು ರಸ್ತೆಯ ಹೆಸರು ಬದಲಾವಣೆ,  ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಹೆಸರಿಡುವ ಪ್ರಸ್ತಾಪಕ್ಕೆ ವಿರೋಧ


ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜು ರಸ್ತೆಯ ಹೆಸರು ಬದಲಾವಣೆ ಮಾಡಲು ಮುಂದಾಗಿರುವ ಮಹಾನಗರ ಪಾಲಿಕೆ ಕ್ರಮವನ್ನು ಖಂಡಿಸಿ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಈಗಾಗಲೇ ರಸ್ತೆಗೆ ಸಂತ ಅಲೋಶಿಯಸ್ ಎಂಬ ಹೆಸರಿದ್ದು ಅದನ್ನು ಬದಲಾಯಿಸಿ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರಿಡುವ ಪ್ರಸ್ತಾಪವನ್ನು ಪ್ರತಿಭಟನಾಕಾರರು ವಿರೋಧಿಸಿದರು. ಸಂಸ್ಥೆ ಆರಂಭವಾಗಿ ಶತಮಾನಗಳೇ ಆಗಿದ್ದು, ಆ ನಿಟ್ಟಿನಲ್ಲಿ ಅಲೋಶಿಯಸ್ ಹೆಸರು ಈ ಹಿಂದೆಯೇ ಇತ್ತು. ಆದರೆ ಈಗ ಏಕಾಏಕಿಯಾಗಿ ಹೆಸರು ಬದಲಿಸಲು ಮುಂದಾಗಿರೋದು ಸರಿಯಲ್ಲ ಅಂತಾ ಕಾಲೇಜಿನ ರೇ. ಫಾದರ್ ರೆಕ್ಟರ್ ಡೆನೀಶಿಯಸ್ ವಾಝ್ ಹೇಳಿದರು. ಈ ಬಗ್ಗೆ ವಿಧಾನ ಪರಿಷತ್ ಪ್ರಸ್ತಾವನೆ ಮಾಡುತ್ತೇನೆ. ರಸ್ತೆಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಬೇಕಾಗಿರುವುದ್ ಬೇಸರದ ವಿಚಾರ ಅಂತಾ ಹೇಳಿದರು.

Related posts

Leave a Reply