Header Ads
Header Ads
Breaking News

ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ “ವಿಶ್ವ ಪರಿಸರ ದಿನಾಚರಣೆ”

ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ’ಪರಿಸರ ದಿನಾಚರಣೆ’ಯನ್ನು ಆಚರಿಸಲಾಯಿತು. ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ವೆಂಕಟೇಶ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಮಾನ್ಸೂನ್ ಸಮಯದಲ್ಲಿ ಹವಾಮಾನದ ಬದಲಾವಣೆ ಮತ್ತು ಗಿಡಮರಗಳನ್ನು ನೆಡುವುದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಂ/ಫಾ/ರವಿ ಸಂತೋಷ್ ಕಾಮತ್‌ರವರು ಪ್ರಕೃತಿಯಲ್ಲಿ ದೇವರನ್ನು ಕಾಣಬೇಕೆಂಬ ಸಾರವನ್ನು ಹಾಗೂ ಪ್ರತಿಯೊಂದು ಧರ್ಮ ಸೃಷ್ಟಿಯನ್ನು ಆರಾಧಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.ಈ ಸಂದರ್ಭದಲ್ಲಿ ವಂ/ಫಾ/ ರವಿ ಸಂತೋಷ್ ಕಾಮತ್ ಎಸ್.ಜೆ. ಅವರು ಜೆಸ್ವಿಟ್ ಸಂಸ್ಥೆಯಲ್ಲಿ ಧಾರ್ಮಿಕ ಜೀವನದ ೬೦ ವರ್ಷಗಳನ್ನು ಪೂರೈಸಿದ ಸಲುವಾಗಿ ಸನ್ಮಾನಿಸಲಾಯಿತು. ಅದೇ ರೀತಿ ಪರಿಸರ ಪ್ರೇಮಿ ಶ್ರೀ ಕೃಷ್ಣಪ್ಪರವರ ಪರಿಸರ ಸೇವೆಗಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿ ಪರಿಷತ್ ನಾಯಕ ತಿಲಕ್‌ರವರು ಪರಿಸರವನ್ನು ಉಳಿಸುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ವಂ/ಫಾ/ ಎರಿಕ್ ಮಥಾಯಸ್ ಎಸ್.ಜೆ. ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುದುರೆಮುಖ ಕಬ್ಬಣ ಮತ್ತು ಅದಿರು ಕಾರ್ಖಾನೆಯ ನಿವೃತ್ತ ಅಧಿಕಾರಿ ಹಾಗೂ ಪರಿಸರವಾದಿ ಕೃಷ್ಣಪ್ಪ ಟಿ ಪ್ರಾಚಾರ್ಯರಾದ ವಿನ್ಸೆಂಟ್ ಮೆಂಡೋನ್ಸಾ, ಉಪಪ್ರಾಂಶುಪಾಲರಾದ ರೋಶನ್ ಡಿಸೋಜಾ, ತರಬೇತಿ ಅಧಿಕಾರಿಯಾದ ರೋಮಿಯಸ್ ಡಿಸೋಜಾ ಮತ್ತು ವಿದ್ಯಾರ್ಥಿ ಪರಿಷತ್ ನಾಯಕ ತಿಲಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply