Header Ads
Header Ads
Breaking News

ಸಂತ ಅಲೋಶಿಯಸ್ ಗೊಂಝಾಗ ಶಾಲೆಯಲ್ಲಿ ಕಲರ್‍ಸ್ ಡೇ .ಎಲ್‌ಕೆಜಿ, ಯುಕೆಜಿ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮ.

ಮಂಗಳೂರಿನ ಪ್ರತಿಷ್ಟಿತ ಶಾಲೆಗಳ ಪೈಕಿ ಒಂದಾದ ಸೈಂಟ್ ಅಲೋಶಿಯಸ್ ಗೊಂಝಾಗ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗಾಗಿ ’ಕಲರ್‍ಸ್ ಡೇ’ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಹರಳು ಹುರಿದಂತೆ ಮಾತನಾಡುವ ಮುದ್ದು ಮುದ್ದಾದ ಮುಗ್ಧ ಮನಸ್ಸಿನ ಪುಟಾಣಿ ಮಕ್ಕಳು,ಕೆಂಪು,ಹಳದಿ,ನೀಲಿ,ಮತ್ತು ಹಸಿರು ಬಣ್ಣದ ಬಟ್ಟೆದರಿಸಿ ಆಯ ಆಯ ಬಣ್ಣದ ವಿಶಿಷ್ಟತೆಯ ಬಗ್ಗೆ ಹೇಳಿ ಹಾಡಿನ ಮೂಲಕ ಮನೋರಂಜಿಸಿದರು. ಹೌದು ಇದು ಕಂಡು ಬಂದಿರುವುದು ಸೈಂಟ್ ಅಲೋಶಿಯಸ್ ಗೊಂಝಾಗ ಶಾಲೆಯಲ್ಲಿಈ ಸಂದರ್ಭ ಮಾತನಾಡಿದ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೇವರೆಂಡ್ ಫಾದರ್ ಮೆಲ್ವಿನ್ ಮೆಂಡೋನ್ಸಾ ಎಸ್.ಜೆ. ಮಕ್ಕಳೊಂದಿಗೆ ಇದ್ದಾಗ ಸಮಯ ಹೋಗುವುದೇ ಗೊತ್ತಾಗುವುದಿಲ್ಲ.ಮಕ್ಕಳೊಂದಿಗೆ ನಾವು ಕೂಡ ಮಕ್ಕಳಾಗಿ ಅವರ ಪ್ರಪಂಚದಲ್ಲೇ ತಲ್ಲಿನರಾಗುತ್ತೇವೆ ಅಂತಹಾ ಅದ್ಬುತ ಶಕ್ತಿ ಪುಟಾಣಿ ಮಕ್ಕಳಿಗಿದೆ ಎಂದು ಹೇಳಿದರುಬಳಿಕ ಮಾತನಾಡಿದ ಸೈಂಟ್ ಅಲೋಶಿಯಸ್ ಗೊಂಝಾಗ ಶಾಲೆಯ ಪ್ರಾಂಶುಪಾಲರಾದ ಗ್ರೇಸ್ ನೊರೊನ್ಹಾ ಪ್ರತೀ ದಿನ ಸಮವಸ್ತ್ರದಲ್ಲಿ ನೋಡಿವ ಮಕ್ಕಳು ಬಣ್ಣ ಬಣ್ಣದ ಬಟ್ಟೆ ದರಿಸಿದನ್ನು ನೋಡುವಾಗ ಸಂತೋಷವಾಗುತ್ತದೆ. ಎಂದು ಹೇಳಿದರು.

ನಂತರ ಮಕ್ಕಳೋಂದಿಗೆ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೇವರೆಂಡ್ ಫಾದರ್ ಮೆಲ್ವಿನ್ ಮೆಂಡೋನ್ಸಾ ಎಸ್.ಜೆ. ಮತ್ತು ಸೈಂಟ್ ಅಲೋಶಿಯಸ್ ಗೊಂಝಾಗ ಶಾಲೆಯ ಪ್ರಾಂಶುಪಾಲರಾದ ಗ್ರೇಸ್ ನೊರೊನ್ಹಾ ತರಗತಿ ತೆರಳಿ ಅಲ್ಲಿ ಸೆಲ್ಫೀ ತೆಗೆದು ಮಕ್ಕಳೊಂದಿಗೆ ಕೆಲ ಕಾಲ ಕಳೆದರು.ಈ ಸಂದರ್ಭ ಅದ್ಯಾಪಕರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Related posts

Leave a Reply