Header Ads
Header Ads
Breaking News

ಸಂತ ಅಲೋಶಿಯಸ್ ಗೋಂಝಾಗ ಸೂಲ್ಕ್‌ನಲ್ಲಿ ಪ್ರಕೃತಿ ಸ್ಪರ್ಶ

 ಮಂಗಳೂರಿನ ಸಂತ ಅಲೋಶಿಯಸ್ ಗೋಂಝಾಗ ಸೂಲ್ಕ್‌ನಲ್ಲಿ ಪ್ರಕೃತಿ ಸ್ಪರ್ಶ – ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ಸಂತ ಅಲೋಶಿಯಸ್ ಗೋಝಾಂಗ ಸೂಲ್ಕ್‌ನ ಸಭಾಂಗಣದಲ್ಲಿ ಪ್ರಕೃತಿ ಸ್ಪರ್ಶ – ವನಮಹೋತ್ಸವ ಕಾರ್ಯಕ್ರಮ ನಡೆಯಿತು.ಇನ್ನು ಕಾರ್ಯಕ್ರಮವನ್ನು ಗಿಡನೆಡುವ ಮೂಲಕ ಗಣ್ಯರು ಉದ್ಘಾಟಿಸಿದರು. ಈ ವೇಳೆ ಸಂತ ಅಲೋಶಿಯಸ್ ಗೋಝಾಂಗ ಸೂಲ್ಕ್ ಅಧ್ಯಕ್ಷ ಡಾ| ಫಾದರ್ ಲಿಯೋ ಡಿಸೋಜಾ ಮಾತನಾಡಿ, ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತಿ ಶ್ಲಾಘನೀಯ ಅಂತಾ ಹೇಳಿದರು.ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಸ್ಯಶ್ಯಾಮಲಾ ಅಧ್ಯಕ್ಷ ದಿನೇಶ್ ನಾಯಕ್ ಅವರು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಿದರು. ಪರಿಸರದಲ್ಲಿರುವ ಗಿಡ- ಮರಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಿಯಿಸಿದರು.ಈ ವೇಳೆ ಪ್ರಸಾದ್, ಶಾಲಾ ಪ್ರಾಂಶುಪಾಲರಾದ ಗ್ರೇಸ್ ನೊರೊನ್ಹಾ ಮತ್ತಿತರು ಉಪಸ್ಥಿತಿರಿದ್ದರು.ಇನ್ನು ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರಬಂಧ, ಡ್ಯಾಯಿಂಗ್ ಹಾಗೂ ಬಿತ್ತಿಚಿತ್ರ ರಚನೆ ಇನ್ನಿತರ ಸ್ಪರ್ಧೆಯನ್ನ ಆಯೋಜಿಸಿದ್ದು, ಇದರ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯ್ತು, ಇದೇ ವೇಳೆ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ಡ್ಯಾನ್ಸ್ , ಹಾಡುಗಳ ಮೂಲಕ ಜಾಗೃತಿ ಮೂಡಿಸಿದರು.

Related posts

Leave a Reply