Header Ads
Header Ads
Breaking News

ಸಂತ ಅಲೋಶಿಯಸ್ ಫ್ರೌಡ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮಂಗಳೂರಿನ ಕೊಡಿಯಾಲ್ ಬೈಲ್ ಸಂತ ಅಲೋಶಿಯಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನ ಆಚರಿಸಲಾಯ್ತು.ಈಕೋ ಕ್ಲಬ್ ಹಾಗೂ ಸಂತ ಅಲೋಶಿಯಸ್ ಪ್ರೌಢಶಾಲೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಪರಿಸರವಾದಿ ದಿನೇಶ್ ಹೊಳ್ಳ ಅವರು ಗಿಡವನ್ನ ನೆಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವ್ರು, ವಿದ್ಯಾರ್ಥಿಗಳು ಪರಿಸರ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು.

ಪರಿಸರವನ್ನ ರಕ್ಷಿಸುವ ಕೆಲಸ ಮಾಡಬೇಕೆಂದರು.ಈ ವೇಳೆ ಶಾಲಾ ಮುಖ್ಯೋಪಾಧ್ಯಾಯರಾದ ರೇ.ಫಾದರ್ ಜರಾಲ್ಡ್ ಪುಟಾಡೋ,ಉಪ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಎಸ್ ಉಪಸ್ಥಿತರಿದ್ದರು. ಇನ್ನು ಪರಿಸರ ದಿನಾಚರಣೆ ಅಂಗವಾಗಿ ಪಾಸ್ಲಿಕ್ ಮುಕ್ತ ಸ್ವಚ್ಚಾ ಪರಿಸರ ಎಂಬುದರ ಕುರಿತು ಚಿತ್ರಕಲಟ ಸ್ಪರ್ಧೆ ನಡೆಯಿತು.

Related posts

Leave a Reply